ಹೊಸದಿಗಂತ ಡಿಜಿಟಲ್ ಡೆಸ್ಕ್:
ತೈವಾನ್ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ಗಳ ಬಹುದೊಡ್ಡ ಉತ್ಪಾದನ ಘಟಕಗಳನ್ನು ಹೊಂದಿದೆ. ಭಾರತ ಕೂಡ ತೈವಾನ್ ಜೊತೆಗೂಡಿ ಸೆಮಿಕಂಡಕ್ಟರ್ ಗಳನ್ನು ಉತ್ಪಾದನಾ ಕೇಂದ್ರ ತೆರೆಯಲು ಸಜ್ಜಾಗಿದೆ.
ಈ ಬೆಳವಣಿಗೆಗಳ ನಡುವೆ ತೈವಾನ್ ನ ಸೆಮಿಕಂಡಕ್ಟರ್ ಗಳ ರಫ್ತಿನ ಮೇಲೆ ಬಹುದೊಡ್ಡ ಮೊತ್ತದ ಲಾಭವಾಗಿದೆ. ಡಿ.2021ರಲ್ಲಿ ಬರೋಬ್ಬರಿ 4,46,448 ಬಿಲಿಯನ್ ಡಾಲರ್ ದಾಖಲೆಯ ಲಾಭ ಗಳಿಸಿದೆ.
2020ರ ಡಿಸೆಂಬರ್ ಗೆ ಹೋಲಿಸಿದರೆ 2021ರಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನ, ಮಾಹಿತಿ, ಸಂವಹನ, ಆಡಿಯೊ-ವಿಡಿಯೊ ಉತ್ಪನ್ನಗಳು, ಲೋಹಗಳು, ಪ್ಲಾಸ್ಟಿಕ್ಸ್ ಮತ್ತು ರಬ್ಬರ್ ಮಾರಾಟ ಹೆಚ್ಚಾಗಿವೆ.
ಈ ಉತ್ಪನ್ನಗಳ ರಫ್ತು ಕೂಡ ಹೆಚ್ಚಾಗಿದ್ದು, ಚೀನಾಕ್ಕೆ ಶೇ.16.2, ಹಾಂಗ್ ಕಾಂಗ್ ಗೆ ಶೇ. 23.8, ಏಷಿಯನ್ ಶೇ.35.8, ಜಪಾನ್ ಶೇ. 29ರಷ್ಟು ಹಾಗೂ ಅಮೆರಿಕಕ್ಕೆ ಶೇ.22.1 ರಷ್ಟು ರಫ್ತು ಮಾಡಲಾಗಿದೆ ಎಂದು ತೈವಾನ್ ಹಣಕಾಸು ಸಚಿವಾಲಯ ತಿಳಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ