ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಫರಾನ್ ಅಕ್ತರ್ ಡ್ರೀಮ್ ಪ್ರಾಜೆಕ್ಟ್ ಜೀ ಲೇ ಝರಾ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಹಾಗೂ ಕಟ್ರೀನಾ ಕೈಫ್ ಜೋಡಿಯಾಗ್ತಿದ್ದಾರಂತೆ.
ಹೌದು, ಈ ಸಿನಿಮಾ ಕಾಸ್ಟ್‌ನಲ್ಲಿ ಕಟ್ರೀನಾ ಮೊದಲಿನಿಂದಲೂ ಇದ್ದರು. ಇವರ ಜೋಡಿಯಾಗಿ ವಿಕ್ಕಿ ಕೌಶಲ್ ಬಂದರೆ ಚೆನ್ನಾಗಿರುತ್ತದೆ ಎನ್ನೋದು ಫರಾನ್ ಆಸೆಯಂತೆ.
ಈಗಾಗಲೇ ಸಿನಿಮಾಗೆ ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ ಹಾಗೂ ಕತ್ರೀನಾ ಕೈಫ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಜೋಡಿ ಯಾರೆಂದು ಫರಾನ್ ನಿರ್ಧರಿಸಬೇಕಿದೆ. ಝಿಂದಗಿ ನಾ ಮಿಲೇಗಿ ದೊಬಾರಾ ರೀತಿ ಈ ಸಿನಿಮಾ ಕೂಡ ಟ್ರಾವೆಲಿಂಗ್, ರೋಡ್ ಟ್ರಿಪ್, ಜೀವನದ ಮೌಲ್ಯದ ಬಗ್ಗೆ ಇರಲಿದೆ.
ಈಗಾಗಲೇ ಜೀ ಲೇ ಝರಾ ತಂಡ ವಿಕ್ಕಿ ಬಳಿ ಮಾತನಾಡಿದ್ದು, ವಿಕ್ಕಿ ಯೆಸ್ ಅಂದರೆ ಕ್ಯಾಟ್ ಹಾಗೂ ವಿಕ್ಕಿಯನ್ನು ತೆರೆಯ ಮೇಲೆ ಜೋಡಿಯಾಗಿ ಮೊದಲ ಬಾರಿ ನೋಡಬಹುದಾಗಿದೆ.