ಇಂಟರ್‌ ಪೋಲ್‌ ಸೇರಲು ಭಾರತದ ಸಹಾಯ ಕೋರಿದ ತೈವಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕ ಪೆಲೋಸಿಭೇಟಿಯ ನಂತರ ತೈವಾನ್‌ ಸುತ್ತಲೂ ಚೀನಾದ ಮಿಲಿಟರಿ ವ್ಯಾಯಾಮಗಳ ಹೆಚ್ಚಳದ ನಡುವೆ ಇಂಟರ್‌ ಪೋಲ್‌ ಗೆ ಸೇರ್ಪಡೆಗೊಳ್ಳಲು ತೈವಾನ್‌ ಭಾರತದ ಸಹಾಯವನ್ನು ಕೋರಿದೆ.

1984 ರವರೆಗೆ, ತೈವಾನ್ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯ ಭಾಗವಾಗಿತ್ತು ಆದರೆ ಚೀನಾ ತೈವಾನ್‌ ಅನ್ನು ಹೊರಹಾಕಿತ್ತು. ಜಾಗತಿಕವಾಗಿ ವರ್ಚಸ್ಸು ಹೊಂದಿರುವ ಚೀನಾ ತನ್ನ ಲಾಭಕ್ಕಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆಯನ್ನು (ಇಂಟರ್‌ಪೋಲ್) ದುರುಪಯೋಗಪಡಿಸಿಕೊಂಡಿದೆ, 2016 ರಿಂದ ತನ್ನ ಆರ್ಥಿಕ ಶಕ್ತಿಯನ್ನು ಬಳಸಿಕೊಂಡು ಇಂಟರ್‌ಪೋಲ್ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿದೆ ಎಂದು ಆರೋಪಿಸಲಾಗಿದೆ.

“ತೈವಾನ್ ಇಂಟರ್‌ಪೋಲ್‌ನ ಸದಸ್ಯ ರಾಷ್ಟ್ರವಲ್ಲ. ಆದ್ದರಿಂದ ನಾವು ನಮ್ಮ ನಿಯೋಗವನ್ನು ಸಾಮಾನ್ಯ ಸಭೆಗೆ ಕಳುಹಿಸಲು ಸಾಧ್ಯವಿಲ್ಲ. ಭಾರತವು ನಮ್ಮನ್ನು ಆಹ್ವಾನಿಸುವ ಅಧಿಕಾರವನ್ನು ಹೊಂದಿರುವ ಆತಿಥೇಯ ರಾಷ್ಟ್ರವಾಗಿದೆ. ಭಾರತ ಮತ್ತು ಇತರರು ತೈವಾನ್ ಅನ್ನು ವೀಕ್ಷಕರಾಗಿ ಆಹ್ವಾನಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ” ತೈವಾನ್‌ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!