ತೈವಾನ್‌ ಭೇಟಿ ಹಿನ್ನೆಲೆ: ನಾನ್ಸಿ ಪೆಲೋಸಿ ಮೇಲೆ ನಿರ್ಬಂಧ ವಿಧಿಸಿದ ಚೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದ ವಿರೋಧದ ನಡುವೆಯೂ ತೈವಾನ್‌ ಭೇಟಿನೀಡಿದ ಅಮೆರಿಕದ ಸ್ಪೀಕರ್‌ ನಾನ್ಸಿ ಪೆಲೋಸಿ ಅವರ ಮೇಲೆ ಚೀನಾ ನಿರ್ಬಂಧ ವಿಧಿಸಿದೆ. ಈ ಕುರಿತು ಹೇಳಿಕೆಯೊಂದನ್ನು ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ್ದು ಆಕೆಯ “ಕೆಟ್ಟ” ಮತ್ತು “ಪ್ರಚೋದನಕಾರಿ” ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮೇಲೆ ನಿರ್ಬಂಧ ಹೇರಲು ಚೀನಾ ನಿರ್ಧರಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

“ಚೀನಾದ ಗಂಭೀರ ಕಾಳಜಿ ಮತ್ತು ದೃಢವಾದ ವಿರೋಧದ ಹೊರತಾಗಿಯೂ, ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಇದು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಗಂಭೀರವಾಗಿ ಹಸ್ತಕ್ಷೇಪ ಮಾಡಿದಂತಾಘಿದೆ. ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸಿದ್ದಲ್ಲದೇ ಏಕ-ಚೀನಾ ನೀತಿಯನ್ನು ಕಡೆಗಣಿಸಿ ತೈವಾನ್ ಜಲಸಂಧಿಯ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಹಾಕಿದಂತಾಗಿದೆ” ಎಂದು ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!