ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಮಳೆಗೆ ಕಂಗಾಲಾಗಿರುವ ಆಗ್ರಾದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ತಾಜ್ ಮಹಲ್‌ನ ಮುಖ್ಯ ಗೋಪುರದಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿದೆ. ಜೊತೆಗೆ ಮಹಲ್‌ನ ಆವರಣದಲ್ಲಿರುವ ಉದ್ಯಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
ತಾಜ್ ಮಹಲ್ ಆವರಣದ ಉದ್ಯಾನ ಜಲಾವೃತವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲಧ ಆಗುತ್ತಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇದೊಂದು ಸ್ವಾಭಾವಿಕ ನೀರು ಜಿನುಗುವಿಕೆಯಾಗಿದೆ ಇದರಿಂದ ತಾಜ್‌ಮಹಲ್‌ಗೆ ಯಾವುದೇ ಅಪಾಯ ಇಲ್ಲ ಎಂದಿದ್ದಾರೆ. ಇಲಾಖೆಯ ಮುಖ್ಯ ಅಧೀಕ್ಷಕ ರಾಜ್‌ಕುಮಾರ್ ಪಟೇಲ್ ಪ್ರತಿಕ್ರಿಯಿಸಿ, ತಾಜ್ ಮಹಲ್‌ನ ಮುಖ್ಯ ಗೋಪುದಲ್ಲಿ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದು ಸ್ವಾಭಾವಿಕ. ಗೋಪುರಕ್ಕೆ ಯಾವುದೇ ಹಾನಿಯಾಗಿಲ್ಲ. ಮುಖ್ಯ ಗೋಪುರವನ್ನು ಡ್ರೋನ್ ಕ್ಯಾಮೆರಾ ಮೂಲಕ ಪರಿಶೀಲಿಸಲಾಗಿದೆ ಎಂದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ