March 1, 2026
Sunday, March 1, 2026
spot_img

Take Care | ಸೂರ್ಯನ ಧಗೆ ಜಾಸ್ತಿಯಾಗ್ತಿದೆ, ಮಕ್ಕಳನ್ನು ಉರಿ ಬಿಸಿಲಿನಿಂದ ರಕ್ಷಿಸಿಕೊಳ್ಳೋದು ಹೇಗೆ?

ಬೆಸಿಗೆ ಕಾಲ ತೀವ್ರಗೊಳ್ಳುತ್ತಿದ್ದಂತೆ ಸೂರ್ಯನ ತಾಪಮಾನ ದಿನೇದಿನೇ ಏರುತ್ತಿದೆ. ಹೆಚ್ಚಿನ ಉಷ್ಣತೆಯಿಂದ ಮಕ್ಕಳ ಆರೋಗ್ಯದ ಮೇಲೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಪೋಷಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ.

ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಸೂರ್ಯನ ಕಿರಣಗಳು ಅತ್ಯಂತ ತೀವ್ರವಾಗಿರುತ್ತವೆ. ಈ ಸಮಯದಲ್ಲಿ ಮಕ್ಕಳನ್ನು ಹೊರಗೆ ಆಟಕ್ಕೆ ಕಳುಹಿಸುವುದನ್ನು ತಪ್ಪಿಸುವುದು ಒಳಿತು. ಹೊರಗೆ ಹೋಗಬೇಕಾದ ಪರಿಸ್ಥಿತಿ ಇದ್ದರೆ ತಲೆಗೆ ಟೋಪಿ, ಕಣ್ಣಿಗೆ ಸನ್ ಗ್ಲಾಸ್ ಹಾಗೂ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು.

ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ಮಕ್ಕಳಿಗೆ ಆಗಾಗ್ಗೆ ನೀರು, ನಿಂಬೆ ಜೂಸ್, ಮಜ್ಜಿಗೆ ಅಥವಾ ಎಳನೀರು ನೀಡಬೇಕು. ಹೆಚ್ಚು ಸಿಹಿ ಪಾನೀಯಗಳನ್ನು ತಪ್ಪಿಸುವುದು ಉತ್ತಮ.

ಮಕ್ಕಳು ತಲೆಸುತ್ತು, ಅಸ್ವಸ್ಥತೆ, ಹೆಚ್ಚಿದ ದೇಹದ ತಾಪಮಾನ ಇತ್ಯಾದಿ ಲಕ್ಷಣಗಳನ್ನು ಕಂಡರೆ ತಕ್ಷಣ ನೆರಳು ಪ್ರದೇಶಕ್ಕೆ ಕರೆದೊಯ್ಯಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಬೇಕು.

ಇದನ್ನೂ ಓದಿ:

ಮನೆಯಲ್ಲಿ ವಾತಾವರಣ ತಂಪಾಗಿರಲು ಕಿಟಕಿಗಳನ್ನು ಮುಚ್ಚಿ, ಪರದೆಗಳನ್ನು ಬಳಸಿ. ಸಮತೋಲನ ಆಹಾರ ಹಾಗೂ ಸಮರ್ಪಕ ನಿದ್ರೆ ಮಕ್ಕಳ ದೇಹದ ಶಕ್ತಿಯನ್ನು ಕಾಪಾಡಲು ಸಹಕಾರಿ.

ಸ್ವಲ್ಪ ಜಾಗ್ರತೆ ಮತ್ತು ಮುನ್ನೆಚ್ಚರಿಕೆಯಿಂದ ಉರಿ ಬಿಸಿಲಿನ ತೊಂದರೆಗಳಿಂದ ಮಕ್ಕಳನ್ನು ಸುರಕ್ಷಿತವಾಗಿರಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !