September 14, 2026
Monday, September 14, 2026
spot_img

SKIN CARE | ಸೂರ್ಯನ ಹಾರ್ಷ್‌ ಕಿರಣಗಳಿಂದ ಮುಖವೆಲ್ಲ ಟ್ಯಾನ್‌ ಆಗಿದ್ಯಾ? ಈ ಮನೆಮದ್ದು ಟ್ರೈ ಮಾಡಿ

ಬೇಸಿಗೆ ಬಂತೆಂದು ಕೆಲಸಗಳನ್ನು ಬಿಟ್ಟು ಮನೆಯಲ್ಲಿ ಕೂರೋಕೆ ಸಾಧ್ಯವಾ? ಆಗಲ್ಲ ಅಲ್ವಾ? ಹೊರಗೆ ಹೋದರೂ ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಹೋಗ್ತೇವೆ. ಹಂಗಿದ್ದರೂ ಟ್ಯಾನ್‌ ಆಗೋದು ತಪ್ಪೋದಿಲ್ಲ. ಇದಕ್ಕಾಗಿ ದುಬಾರಿ ಬ್ಯೂಟಿ ಪಾರ್ಲರ್‌ಗೆ ಹೋಗಬೇಕಿಲ್ಲ. ಈ ರೀತಿ ಮಾಡಿ ಸಾಕು..

ಒಂದು ಸ್ಪೂನ್‌ ನಿಂಬೆರಸಕ್ಕೆ ಒಂದು ಸ್ಪೂನ್‌ ಜೇನುತುಪ್ಪ ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಎರಡು ಸ್ಪೂನ್‌ ಮೊಸರಿಗೆ ಒಂದು ಚಿಟಿಕೆ ಅರಿಶಿಣ ಹಾಕಿಕೊಳ್ಳಿ. ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ.ಇಪ್ಪತ್ತು ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಟೊಮ್ಯಾಟೊ ಪಲ್ಪ್‌ಗೆ ಮೊಸರು ಹಾಕಿಕೊಂಡು ಪೇಸ್ಟ್‌ ತಯಾರಿಸಿ ಮುಖಕ್ಕೆ ಹಚ್ಚಿ.ಇಪ್ಪತ್ತು ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಫ್ರೆಶ್‌ ಅಲೋವೆರಾದ ಲೋಳೆಯನ್ನು ಮುಖಕ್ಕೆ ಹಚ್ಚಿ. ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ

ಆಲೂಗಡ್ಡೆಯ ರಸ ತೆಗೆದುಕೊಂಡು ಮುಖಕ್ಕೆ ಹಚ್ಚಿ. ಇದು ನ್ಯಾಚುರಲ್‌ ಬ್ಲೀಚಿಂಗ್‌ ಏಜೆಂಟ್‌.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !