May 10, 2026
Sunday, May 10, 2026
spot_img

ಪ್ರೀತಿಸಿದವನನ್ನೇ ಮದುವೆಯಾಗೋದಕ್ಕೆ ಹೆತ್ತವರಿಗೆ ಚಪಾತಿಯಲ್ಲಿ ಇಲಿ ಪಾಷಾಣ ಬೆರೆಸಿ ಕೊಟ್ಟ ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿಸಿದ ಹುಡುಗನನ್ನು ನಂಬಿಕೊಂಡು ಆತನನ್ನೇ ಮದುವೆಯಾಗೋದಕ್ಕೆ ತನ್ನ ಪೋಷಕರಿಗೆ ಇಲಿ ಪಾಷಾಣ ಬೆರೆಸಿದ ಚಪಾತಿಯನ್ನು ಮಗಳು ತಿನ್ನಿಸಿದ್ದಾಳೆ.

ಮಧ್ಯಪ್ರದೇಶದ ಮರೆನಾದಲ್ಲಿ ಈ ಘಟನೆ ನಡೆದಿದೆ. ಪೋರ್ಸಾ ಗ್ರಾಮದ ಅಪ್ರಾಪ್ತ ವಯಸ್ಕ ಹುಡುಗಿ ಈ ಕೆಲವನ್ನು ಮಾಡಿದ್ದಾಳೆ. ತನ್ನ ಬಾಯ್‌ಫ್ರೆಂಡ್‌ ಜೊತೆಗೆ ಮದುವೆಗೆ ಒಪ್ಪೋದಿಲ್ವೇನೋ ಎನ್ನುವ ಭಯಕ್ಕೆ ಆತನ ಸಹಾಯದಿಂದ ಕೊಲೆ ಪ್ಲಾನ್‌ ಮಾಡಿದ್ದಾಳೆ.

ಚಪಾತಿ ಹಿಟ್ಟನ್ನು ಕಲಸುವ ವೇಳೆ ಬಾಯ್‌ಫ್ರೆಂಡ್‌ ಸುದಾಮನ ಬಳಿ ಇಲಿ ಪಾಷಾಣ ತರಿಸಿಕೊಂಡಿದ್ದಾಳೆ. ಇವತ್ತು ನಾನೇ ಅಡುಗೆ ಮಾಡುತ್ತೇನೆ ಎಂದು ಹೇಳಿ ಚಪಾತಿ ಹಿಟ್ಟಿಗೆ ವಿಷ ಬೆರೆಸಿ ಅಡುಗೆ ಮಾಡಿದ್ದಾಳೆ. ಇದನ್ನು ತಿಂದ ಮಿಥಿಲಾ ಹಾಗೂ ಗಬ್ಬರ್‌ ಪ್ರಜಾಪತಿ ಅನಾರೋಗ್ಯಕ್ಕೀಡಾಗಿದ್ದಾರೆ. ಸದ್ಯ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಾಣಿಸಿದೆ.

ಮಗಳು ಹಾಗೂ ಆತನ ಬಾಯ್‌ಫ್ರೆಂಡ್‌ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !