ಮೀಸಲು ಹಣ ಬಿಡುಗಡೆಗೆ ಕತಾರ್‌ ನಲ್ಲಿ ತಾಲೀಬಾನ್‌- ಅಮೆರಿಕ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತೀವ್ರ ಭೂಕಂಪದಿಂದ ತತ್ತರಿಸಿ ಹೋಗಿರುವ ಅಪ್ಘನ್‌ ತಾಲೀಬಾನ್‌ ಸರ್ಕಾರವು ಮೀಸಲು ಹಣ ಬಿಡುಗಡೆಗೆ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದು ತಾಲೀಬಾನ್‌ ಸರ್ಕಾರದ ಪ್ರತಿನಿಧಿಗಳು ಅಮೆರಿಕ ಸರ್ಕಾರದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಂಬಂಧ ಇಂದು ಕತಾರ್‌ ನಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಬಿಡುಗಡೆಯಾಗುವ ಹಣವು ಜನರಿಗೆ ಹೋಗುತ್ತದೆ ಎಂಬುದನ್ನು ಅಮೆರಿಕ ಖಚಿತಪಡಿಸಕೊಳ್ಳಲು ಬಯಸಿದ್ದು ಶ್ವೇತಭವನವು ಈ ಪ್ರಯತ್ನದಲ್ಲಿ “ತುರ್ತಾಗಿ” ಕೆಲಸ ಮಾಡುತ್ತಿದೆ ಎಂದು ಹೇಳಿದೆ.ತಾಲಿಬಾನ್‌ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರು ಹಣಕಾಸು ಸಚಿವಾಲಯ ಮತ್ತು ಕೇಂದ್ರ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆಗಾಗಿ ಕತಾರ್ ರಾಜಧಾನಿ ದೋಹಾಗೆ ಆಗಮಿಸಿದ್ದಾರೆ ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಹಫೀಜ್ ಜಿಯಾ ಅಹ್ಮದ್ ಹೇಳಿದ್ದಾರೆ. ಇನ್ನು ಅಮೆರಿಕದ ಪರವಾಗಿ ಅದರ ಅಪ್ಘನ್‌ ರಾಯಭಾರಿ ಟಾಮ್ ವೆಸ್ಟ್ ಭಾಗವಹಿಸಲಿದ್ದು ಮಾನವ ಹಕ್ಕುಗಳು ಮತ್ತು ಹೆಣ್ಣುಮಕ್ಕಳಿಗೆ ಶಾಲೆ ತೆಗೆಯುವುದರ ಕುರಿತು ಅಮೆರಿಕ ಒತ್ತು ನೀಡಲಿದೆ ಎಂದು ಅಮೆರಿಕ ಸಚಿವಾಲಯ ಹೇಳಿದೆ.

ಅಪ್ಘಾನಿಸ್ತಾನದಿಂದ ಸೇನೆಯನ್ನು ವಾಪಸ್‌ ಪಡೆದುಕೊಂಡ ಸಂದರ್ಭದಲ್ಲಿ ಅಮೆರಿಕವು 7 ಬಿಲಿಯನ್ ಡಾಲರ್ ಮೀಸಲುಗಳನ್ನು ಸ್ಥಗಿತಗೊಳಿಸಿತ್ತು ಮತ್ತು ಅಂತರಾಷ್ಟ್ರೀಯ ಸಮುದಾಯವು ಅಫ್ಘಾನಿಸ್ತಾನ ಮತ್ತು ಅದರ ಸುಮಾರು 40 ಮಿಲಿಯನ್ ಜನಸಂಖ್ಯೆಯನ್ನು ಅವಲಂಬಿಸಿರುವ ಶತಕೋಟಿ ನೇರ ನೆರವನ್ನು ನಿಲ್ಲಿಸಿತ್ತು. ಈ ನಡುವೆ ಅಪ್ಘಾನಿಸ್ತಾನದ ಕರೆನ್ಸಿ ಕುಸಿದಿದ್ದು ದೇಶವು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಕೆಲವು ಸಹಾಯವನ್ನು ಪುನಃಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. “ಮಾತುಕತೆಗಳು ನಡೆಯುತ್ತಿವೆ ಮತ್ತು ಚರ್ಚೆಯಲ್ಲಿರುವ ಅಂತಿಮ ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗುವುದು ಎಂಬುದು ನಮ್ಮ ನಿರೀಕ್ಷೆಯಾಗಿದೆ” ಎಂದು ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್‌ನ ಸುಪ್ರೀಂ ಕೌನ್ಸಿಲ್ ಸದಸ್ಯ ಶಾ ಮೆಹ್ರಾಬಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!