ಅಘ್ಘಾನಿಸ್ತಾನದಲ್ಲಿ ಬುರ್ಖಾ ಕಡ್ಡಾಯ; ಹಿಜಾಬ್‌ ಧರಿಸದ ಮಹಿಳೆಯ ತಂದೆ- ಪತಿಗೆ ಶಿಕ್ಷೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಫ್ಘಾನಿಸ್ತಾನದ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದು ಕಡ್ಡಾಯಗೊಳಿಸಿ ತಾಲಿಬಾನ್ ಆದೇಶ ಹೊರಡಿಸಿದ್ದು, ಅದನ್ನು ಉಲ್ಲಂಘಿಸಿದರೆ ಆಕೆಯ ತಂದೆ ಅಥವಾ ಪುರುಷ ಸಂಬಂಧಿಗೆ ಸೆರೆವಾಸ ವಿಧಿಸುವ ಕಾನೂನು ಜಾರಿಗೊಳಿಸಿದೆ.
ಈ ಕಾನೂನಿನ ಪ್ರಕಾರ, ಮಹಿಳೆ ಹಿಜಾಬ್ ಧರಿಸದಿದ್ದರೆ ಮೊದಲು ಆಕೆಯ ಪೋಷಕರಿಗೆ (ತಂದೆ, ಸಹೋದರ ಅಥವಾ ಪತಿ) ಎಚ್ಚರಿಕೆ ನೀಡಲಾಗುತ್ತದೆ. ಆಕೆ ಮತ್ತೆ ತಪ್ಪು ಪುನರಾವರ್ತಿಸಿದರೆ ಆಕೆಯ ಕುಟುಂಬ ಸದಸ್ಯನಿಗೆ ಸೆರೆವಾಸ ವಿಧಿಸಲಾಗುವುದು. ಇದಲ್ಲದೆ, ಮಹಿಳಾ ಸಾರ್ವಜನಿಕ ಉದ್ಯೋಗಿಗಳು ಹಿಜಾಬ್ ಧರಿಸದಿದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿರುವ ಪುರುಷ ನೌಕರನ ಕುಟುಂಬದ ಮಹಿಳಾ ಸದಸ್ಯರು ಹಿಜಾಬ್ ಧರಿಸದಿದ್ದರೆ ಆತನನ್ನೂ ಕೆಲಸದಿಂದ ಅಮಾನತುಗೊಳಿಸಲಾಗುತ್ತದೆ.
“ಶರಿಯಾ ಕಾನೂನಿನ ಪ್ರಕಾರ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಲೇಬೇಕು ಎಂಬ ಸಂದೇಶವಿರುವ ಪೋಸ್ಟರ್‌ ಗಳನ್ನು ತಾಲೀಬಾನಿಗಳು ಎಲ್ಲಾ ಕೆಫೆಗಳು ಮತ್ತು ಅಂಗಡಿಗಳ ಮೇಲೆ ಅಂಟಿಸಿದ್ದಾರೆ. ಈ ಪೋಸ್ಟರ್‌ಗಳಲ್ಲಿ ಮುಖ ಮುಚ್ಚುವ ಬುರ್ಖಾದ ಚಿತ್ರವಿದೆ. ತಾಲೀಬಾನಿಗಳು ಮಹಿಳೆಯರ ಮೇಲೆ ಹೇರುತ್ತಿರುವ ನಿರ್ಬಂಧಗಳಿಗೆ ವಿಶ್ವಾದ್ಯಂತ ಖಂಡನೆಯು ಹೆಚ್ಚಾಗುತ್ತಿದೆ. ಇತ್ತಿಚೆಗೆ ಬಾಲಕಿಯರ ಶಾಲೆ ಮುಚ್ಚುವ, ಡ್ರೈವಿಂಗ್‌ ಲೈಸನ್ಸ್ ಕಸಿದುಕೊಳ್ಳುವ ಮೂಲಕ ತಾಲೀಬಾನ್ ಆಡಳಿತವು ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!