26 ಬಾರಿ ಎವರೆಸ್ಟ್‌ ಏರಿ ತನ್ನದೇ ದಾಖಲೆ ಮುರಿದು ಹೊಸ ದಾಖಲೆ ಬರೆದ ಭೂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದಲ್ಲ ಎರಟಲ್ಲ ಬರೊಬ್ಬರಿ 26 ಬಾರಿ ವಿಶ್ವದ ಅತೀ ಎತ್ತರದ ಪರ್ವತ ಮೌಂಟ್‌ ಎವರೆಸ್ಟನ್ನು ಏರುವ ಮೂಲಕ ನೇಪಾಳದ ವ್ಯಕ್ತಿಯೊಬ್ಬ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ವಿಶ್ವದಾಖಲೆ ಬರೆದಿದ್ದಾನೆ.

ನೇಪಾಳದ 52 ವರ್ಷದ ಕಾಮಿ ರೀಟಾ ಶೇರ್ಪಾ ಈ ದಾಖಲೆ ಬರೆದಿರುವ ಭೂಪ. ಶನಿವಾರದಂದು 8,848.86 ಮೀಟರ್‌ ಎತ್ತರದ ಮೌಂಟ್‌ ಎವರೆಸ್ಟ್‌ ಚಾರಣವನ್ನು ಮುನ್ನಡೆಸಿದ ಈತ ಇತರ ಹತ್ತು ಶೇರ್ಪಾಗಳೊಂದಿಗೆ ಮತ್ತೊಮ್ಮೆ ಪರ್ವತ ಏರಿ ದಾಖಲೆ ಮಾಡಿದ್ದಾನೆ.
“ಕಾಮಿ ರೀಟಾ ತಮ್ಮದೇ ದಾಖಲೆಯನ್ನು ಮುರಿಯುವ ಮೂಲಕ ಕ್ಲೈಂಬಿಂಗ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ” ಎಂದು ನೇಪಾಳದ ರಾಜಧಾನಿ ಕಠ್ಮಂಡುವಿನ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ತಾರಾನಾಥ್ ಅಧಿಕಾರಿ ಹೇಳಿದ್ದಾರೆ.

ಅವರ ಈ ಸಾಧನೆಗೆ ಅವರ ಪತ್ನಿ ಜಂಗ್ಮು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಪರ್ವತಾರೋಹಣಕ್ಕೆ ಬಳಸಿದ ಮಾರ್ಗವು 1953 ರಲ್ಲಿ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ಶೆರ್ಪಾ ಟೆನ್ಸಿಂಗ್ ನಾರ್ಗೆ ಬಳಸಿದ ಮಾರ್ಗವೇ ಆಗಿದ್ದು ಹೆಚ್ಚಿ ಪರ್ವತಾರೋಹಿಗಳು ಇದೇ ಮಾರ್ಗವನ್ನು ಬಳಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!