ಹೊಸದಿಗಂತ ಡಿಜಿಟಲ್ ಡೆಸ್ಕ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ವಿವಿಧ ರೂಲ್ಸ್ ಜಾರಿ ತರುತ್ತಿದ್ದು, ಇದೀಗ ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್ ಜಾರಿಗೊಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಪುರುಷ ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರುವಂತಿಲ್ಲ. ಅಲ್ಲದೆ, ಸರ್ಕಾರಿ ನೌಕರರು ಸೂಟ್ಗಳನ್ನು ಧರಿಸಬಾರದು ಎಂಬ ನಿಯಮವನ್ನೂ ಜಾರಿಗೆ ತರಲಾಗಿದೆ.
ಸೂಟ್ ಧರಿಸುವುದರ ಬದಲು ಉದ್ದನೆಯ ಜುಬ್ಬಾ ಧರಿಸಿ, ಪ್ಯಾಂಟ್ ಹಾಕಿಕೊಳ್ಳಬೇಕು. ಹಾಗೇ ತಮ್ಮ ತಲೆಯನ್ನು ಮುಚ್ಚಲು ಟೋಪಿ ಅಥವಾ ಪೇಟ ಧರಿಸಬೇಕು ಎಂದು ಆದೇಶಿಸಲಾಗಿದೆ.
ಅದೇ ರೀತಿ ಮುಂಜಾನೆ ಮತ್ತು ಮುಸ್ಸಂಜೆಯ ನಡುವೆ 6 ಬಾರಿ ಸರಿಯಾದ ಸಮಯದಲ್ಲಿ ನಮಾಜ್ ಮಾಡಲು ಅಫ್ಘಾನಿಸ್ತಾನದ ಸರ್ಕಾರಿ ಉದ್ಯೋಗಿಗಳಿಗೆ ಸೂಚಿಸಲಾಗಿದ್ದು, , ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ ಕಾರ್ಮಿಕರನ್ನು ಕಚೇರಿಗಳಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಅವರು ಪದೇಪದೆ ಡ್ರೆಸ್ ಕೋಡ್ ನಿಯಮ ಉಲ್ಲಂಘಿಸಿದರೆ ಅವರನ್ನು ಕೆಲಸದಿಂದ ವಜಾ ಮಾಡಬಹುದು ಎಂದು ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.