spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ದೇಶದ ಸ್ತ್ರೀಯರ ಶಿಕ್ಷಣದ ಹಕ್ಕು ಕಸಿದು, ತಮ್ಮ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲೀಬಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇದು ಅಘ್ಭಾನಿಸ್ತಾನದಲ್ಲಿ ತಾಲೀಬಾನಿಗಳ ಇಬ್ಬಗೆಯ ವಿದ್ರೋಹಿ ನೀತಿ. ಇಡೀ ದೇಶದ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ನಿರ್ದಾಕ್ಷಿಣ್ಯವಾಗಿ ಕಸಿದುಕೊಂಡಿರುವ ತಾಲೀಬಾನಿಗಳು, ತಮ್ಮ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ದೇಶದ ಎಲ್ಲಾ ಹೆಣ್ಣುಮಕ್ಕಳನ್ನು 6 ನೇ ತರಗತಿಗೆ ಶಾಲೆಬಿಡಿಸಿ ಅವರ ಮುಂದಿನ ಜೀವನವನ್ನು ಬುರ್ಖಾದೊಳಗೆ ಬಚ್ಚಿಟ್ಟರೆ, ತಾಲೀಬಾನಿಗಳ ಹೆಣ್ಣುಮಕ್ಕಳು ಮಾತ್ರ ದೇಶ ವಿದೇಶದ ಉತ್ತಮ ಶಾಲೆಗಳಲ್ಲಿ ಸ್ವಚ್ಛಂದ ಶಿಕ್ಷಣ ಪಡೆದು ಭವಿಷ್ಯದ ಕನಸು ಕಾಣುತ್ತಿದ್ದಾರೆ. ಅವರ ಕಲಿಕೆಗೆ ಯಾವ ನಿರ್ಬಂಧಗಳೂ ಇಲ್ಲ. ಈ ವಿಚಾರವನ್ನು ಸ್ವತಃ ತಾಲೀಬಾನಿಗಳ ವಕ್ತಾರನೇ ಟಿವಿ ಚಾನಲ್‌ ಒಂದರ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾನೆ.
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, ಅಫ್ಘಾನಿಸ್ತಾನದಲ್ಲಿಎಲ್ಲಾ ಬಾಲಕಿಯರ ಶಿಕ್ಷಣವನ್ನು ನಿಷೇಧಿಸಿದ್ದರೂ ತನ್ನ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ಒಪ್ಪಿಕೊಂಡಿದ್ದಾನೆ. ಕೆಲದಿನ ಗಳ ಹಿಂದೆ ಅಪ್ಘಾನ್‌ ಮಹಿಳೆಯರು 6ನೇ ತರಗತಿಗಿಂತಲೂ ಹೆಚ್ಚಿನ ಶಿಕ್ಷಣ ಪಡೆಯುವುದನ್ನು ನಿಷೇಧಿಸಿ ತಾಲೀಬಾನ್‌ ಆದೇಶ ಹೊರಡಿಸಿತ್ತು.
ಹೌದು ನಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ಹಿಜಾಬ್ ನಿಯಮಗಳನ್ನು ಪಾಲಿಸುತ್ತಾರೆ. ಅವರು ನಾವು ಹೇಳಿದ್ದನ್ನು ಪಾಲಿಸುತ್ತಾರೆ. ಆದ್ದರಿಂದ ನಮ್ಮ ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯುತ್ತಾರೆ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾನೆ.

ಈ ಸಂದರ್ಶನದ ತುಣುಕುಗಳು ವೈರಲ್‌ ಆಗುತ್ತಲೇ ತಾಲೀಬಾನಿಗಳ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ಬುಗಿಲೆದ್ದಿದೆ.  ಸುಹೇಲ್ ಶಾಹೀನ್ ಹಾಗೂ ತಾಲೀಬಾನಿಗಳು ಬೂಟಾಟಿಕೆಯ ಜಗತ್ತು ಎಂದು ಜನರು ಆಕ್ರೋಶ ಹಾಗೂ ವ್ಯಂಗ್ಯಭರಿತ ಟೀಕೆಗಳನ್ನು ಮಾಡುತ್ತಿದ್ದಾರೆ. ಈ ವ್ಯಕ್ತಿಯ ಹೆಣ್ಣುಮಕ್ಕಳು ಹಿಜಾಬ್ ಧರಿಸುವ ಕಾರಣಕ್ಕೆ ಶಿಕ್ಷಣ ಪಡೆಯುತ್ತಿದ್ದಾರಂತೆ.. ವ್ಹಾ. ಎಂತಹ ಬೂಟಾಟಿಕೆ, ಅವನ ಒಬ್ಬ ಮಗಳು ಕತಾರಿ ಫುಟ್ಬಾಲ್ ತಂಡಕ್ಕೆ ಆಡುತ್ತಾಳೆ. ಇನ್ನೊಬ್ಬ ಮಗಳಿಗೆ ಕತಾರಿ ಬಾಯ್‌ಫ್ರೆಂಡ್ ಇದ್ದಾನೆ. ಅವರೆಲ್ಲಾ ಅಲ್ಲಿ ಸ್ವಚಂದ ಜೀವನ ಜೀವಿಸುತ್ತಿದ್ದಾರೆ. ಆದರೆ ಪಾಪದ ಆಫ್ಘನ್ ಹುಡುಗಿಯರು ನಿಜಕ್ಕೂ ಹಿಜಾಬ್ ಗೆ ಆದ್ಯತೆ ನೀಡುತ್ತಾರೆ. ಆದರೆ 6 ನೇ ತರಗತಿಯ ನಂತರ ಅವರ ಬದುಕೇ ಕತ್ತಲಾಗುತ್ತದೆ. ಈ ರಾಕ್ಷಸರು ಅವರ ಶಿಕ್ಷಣ, ಕ್ರೀಡೆಯಲ್ಲಿ ಭಾಗವಹಿಸುವ ಹಕ್ಕನ್ನೇ ಕಿತ್ತುಕೊಂಡಿದ್ದಾರೆ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದರೆ, ತಾಲಿಬಾನ್‌ಗಳು ತಮ್ಮ ಮಕ್ಕಳನ್ನು ಶಾಲೆಗೆ ಹೋಗಲು ಅವಕಾಶವನ್ನು ಕಲ್ಪಿಸಿ ಇತರರಿಗೆ ಶಿಕ್ಷಣವನ್ನು ನಿಷೇಧಿಸುತ್ತಾರೆ. ಜನರಿಗೆ ಮಾಡುವ ವಿದ್ರೋಹವೆಂದರೆ ಇದೆ ಅಲ್ಲವೇ ಎಂದು ಮೊತ್ತೊಬ್ಬ ಟ್ವಿಟರ್‌ ಬಳಕೆದಾರ ಕಿಡಿಕಾರಿದ್ದಾರೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap