ಮಾನವ-ಏಲಿಯನ್‌ಗಳ ಮುಖಾಮುಖಿ ಯಾವಾಗ..? ಈ ಬಗ್ಗೆ ನಾಸಾದ ಮಾಜಿ ವಿಜ್ಞಾನಿ ಬಿಚ್ಚಿಟ್ಟ ರಹಸ್ಯವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಜ್ಞಾನಿಗಳು ಬಾಹ್ಯಾಕಾಶ ಸಂಶೋಧನೆಯಲ್ಲಿ ಮಗ್ನರಾಗಿದ್ದಾರೆ. ವರ್ಷಗಳುರುಳಿದಂತೆ ಬ್ರಹ್ಮಾಂಡದಲ್ಲಿ ಕಾಣಸಿಗುವ ವಿಸ್ಮಯಗಳ ಬಗ್ಗೆ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅನ್ಯಗ್ರಹಗಳಲ್ಲಿ ವಾಸಿಸುವ ಜೀವಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಸಂಶೋಧನೆಗಳ ನಡುವೆಯೇ ನಾಸಾದ ಮಾಜಿ ವಿಜ್ಞಾನಿಯೊಬ್ಬರು ಶೀಘ್ರದಲ್ಲೇ ಸಾಮಾನ್ಯ ಮಾನವರು ಅನ್ಯಗ್ರಹ ಜೀವಿಯನ್ನು ಭೇಟಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಮನುಷ್ಯರು ಏಲಿಯನ್‌ಗಳನ್ನು ಭೇಟಿಯಾಗಲಿದ್ದಾರೆ ಎಂದು ನಾಸಾದ ಮಾಜಿ ವಿಜ್ಞಾನಿ ಜಿಮ್ ಗ್ರೀನ್ ಬಹಿರಂಗಪಡಿಸಿದ್ದಾರೆ. ಬಿಬಿಸಿ ‘ಹಾರ್ಡ್ ಟಾಕ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭೂಮಿಯಾಚೆಗೂ ಒಂದು ಜೀವವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾನವ ನಿಜವಾಗಿಯೂ ಬೆರಗುಗೊಳಿಸುವ ಆವಿಷ್ಕಾರದ ಅಂಚಿನಲ್ಲಿದ್ದಾರೆ. 40 ವರ್ಷಗಳ ಕಾಲ ನಾಸಾದಲ್ಲಿ ಕೆಲಸ ಮಾಡಿದ ಜಿಮ್ ಗ್ರೀನ್ ತನ್ನ ಜೀವಿತಾವಧಿಯಲ್ಲಿ ಅನ್ಯಗ್ರಹ ಜೀವಿಗಳನ್ನು ನೋಡಬೇಕೆಂವ ಆಸೆ ಇದೆಯಂತೆ. ಭೂಮಿಯಂತಹ ಗ್ರಹಗಳು ಮತ್ತು ಕುಡಿಯಲು ನೀರು ಸೇರಿದಂತೆ ಸೂರ್ಯನ ಕಿರಣಗಳನ್ನು ಸ್ಪರ್ಶಿಸುವ ಅನೇಕ ಗ್ರಹಗಳಿವೆ ಎಂದಿದ್ದಾರೆ. ಗ್ರಹಗಳನ್ನು ಮತ್ತು ಅವುಗಳ ಮೇಲಿನ ಹವಾಮಾನವನ್ನು ವೀಕ್ಷಿಸಲು ನಾಸಾ ಇತ್ತೀಚೆಗೆ ಶಕ್ತಿಯುತ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು. ಇದು  ಗ್ರಹಗಳ ಮೇಲೆ ನೀರಿನ ಕುರುಹುಗಳನ್ನು ಕಂಡುಹಿಡಿಯುವುದಕ್ಕೆ ಸಹಾಯಕವಾಗುತ್ತದೆ. ನೀರು ಇದ್ದ ಮೇಲೆ ಅಲ್ಲಿ ಜೀವಿ ಕೂಡ ಇದ್ದೇ ಇರುತ್ತದೆ ಎಂಬ ಅಂಶವನ್ನು ಹೇಳಿದ್ದಾರೆ.

ಜೇಮ್ಸ್ ವೆಬ್ ಟೆಲಿಸ್ಕೋಪ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದರೆ, ಭೂಮಿಯಿಂದ ದೂರದಲ್ಲಿರುವ ಗ್ರಹಗಳ ಮೇಲ್ಮೈ ಹವಾಮಾನ ಪರಿಸ್ಥಿತಿಗಳನ್ನು ಪತ್ತೆ ಹಚ್ಚುವ ಮತ್ತು ಊಹಿಸಲಾಗದ ವಿಷಯಗಳು ಬೆಳಕಿಗೆ ಬರುತ್ತವೆ. ಭೂಮಿಯ ಆಚೆಗೆ ಮತ್ತೊಂದು ಜೀವಿಯ ಆವಿಷ್ಕಾರ ಶೀಘ್ರದಲ್ಲೇ ನಿಜವಾಗಲಿದೆ ಎಂದು ಜಿಮ್ ಗ್ರೀನ್ ಬಹಿರಂಗಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!