ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಡಿಸಲೆದುರು ಫೋಟೋಶೂಟ್ ಮಾಡಿಸಿ ಕೆಲವರು ಮನರಂಜನೆ ತೆಗೆದುಕೊಳ್ಳುತ್ತಾರೆ. ಅವರಿಗೆ ಬಡವರ ಮಾತು ಬೋರ್ ಆಗಲಿದೆ. ನಾನು ಅವರ ಸಿಟ್ಟನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.
ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಬಯಸುತ್ತೇವೆ. ಹಿಂದಿನ ಒಬ್ಬ ಪ್ರಧಾನಿಯನ್ನು ಮಿಸ್ಟರ್ ಕ್ಲೀನ್ ಎಂದು ಕರೆಯಲಾಗುತ್ತಿತ್ತು. ಒಂದು ರೂಪಾಯಿ ಬಿಡುಗಡೆ ಮಾಡಿದರೆ ಬಡವರಿಗೆ 15 ಪೈಸೆ ತಲುಪುತ್ತದೆ ಎಂದು ಹೇಳಿದ್ದರು. ಎಲ್ಲಾ ಕಡೆ ಅವರದ್ದೇ ಸರ್ಕಾರ ಇದ್ದರೂ ಈ ಹೇಳಿಕೆ ನೀಡಿದ್ದರು. ಮೊದಲೆಲ್ಲಾ ಸರ್ಕಾರದ ಹಗರಣಗಳದ್ದೇ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಬರುತ್ತಿತ್ತು. ಆದರೆ ಈಗ ಎಲ್ಲಾ ಬದಲಾಗಿದೆ. ಜನರಿಗಾಗಿಯೇ ನಮ್ಮ ಸರ್ಕಾರ ಇದೆ. ಯಾವುದೇ ಹಗರಣ ಮಾಡದೇ ಒಂದು ಲಕ್ಷ ಕೋಟಿ ರೂ. ಉಳಿಸಿದ್ದೇವೆ. ವಿಕಾಸದ ಹಾದಿಗೆ ದೇಶವನ್ನುತೆರೆದಿದ್ದೇವೆ ಎಂದು ಹೇಳಿದರು.
ಬಡವರಿಗೆ ಸುಳ್ಳಿನ ಘೋಷಣೆ ಅಲ್ಲ, ಸತ್ಯವಾದ ಅಭಿವೃದ್ಧಿ ನೀಡಿದ್ದೇವೆ. ಮಧ್ಯಮ ವರ್ಗದ ಕನಸು ಈಡೇರಿಸಿದ್ದೇವೆ. ಬಡವರಿಗೆ ಈವರೆಗೂ ನಾಲ್ಕು ಕೋಟಿ ಮನೆ ಸಿಕ್ಕಿದೆ. ಕಷ್ಟ ಅನುಭವಿಸಿದರಿಗೆ ಪಕ್ಕಾ ಮನೆಯ ಬೆಲೆ ಏನು ಗೊತ್ತಾಗುತ್ತದೆ. ಮಹಿಳೆಯರಿಗಾಗಿ 12 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಪ್ರತಿ ಮನೆಗೆ ಕುಡಿಯುವ ನೀರು ನೀಡುವುದು ನಮ್ಮ ಉದ್ದೇಶ. ಜಲ ಜೀವನ್ ಮಿಷನ್ ಅಡಿ 12 ಕುಟುಂಬಗಳಿಗೆ ಕುಡಿಯುವ ನೀರು ನೀಡಿದ್ದೇವೆ ಎಂದು ಸರ್ಕಾರದ ಸಾಧನೆ ತಿಳಿಸಿದರು.