ಟಾಕಿಂಗ್ ಟಾಮ್ ಬೊಂಬೆಯೊಳಗೆ ಡ್ರಗ್ಸ್: ಬೆಂಗಳೂರಲ್ಲಿ ಮೂವರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಾಕಿಂಗ್ ಟಾಮ್ ಮಾದರಿಯ ಬೊಂಬೆಯ ಒಳಗಡೆ ಮಾದಕವಸ್ತು ಇಟ್ಟು ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ಪವೀಶ್ (33), ಅಭಿಜಿತ್(25) ಮತ್ತು ಶಫಸುದ್ದೀನ್(29) ಬಂಧಿತರು. ಆರೋಪಿಗಳಿಂದ 15 ಲಕ್ಷ ರೂಪಾಯಿ ಬೆಲೆಬಾಳುವ 137 ಗ್ರಾಂ ತೂಕದ ಮಾದಕವಸ್ತು, ೪ ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಬ್ಯಾಕ್‌ಗೇಟ್ ಡಿಟಿಡಿಸಿ ಎಕ್ಸ್‌ಪ್ರೆಸ್ ಕೊರಿಯರ್ ಸರ್ವೀಸ್ ಬಳಿ ಸ್ಕೂಟರ್‌ನಲ್ಲಿ ಟಾಕಿಂಗ್ ಟಾಮ್ ಬೆಕ್ಕಿನ ಬೊಂಬೆ ಒಳಗೆ ಮಾದಕವಸ್ತು ಇಟ್ಟು ಕೋರಿಯರ್ ಮಾಡಲು ಹಾಗೂ ಜೇಬಿನಲ್ಲಿ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳ ಮಾದಕವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೈಟ್‌ಫೀಲ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!