Sunday, March 26, 2023

Latest Posts

ತಮನ್ನಾ-ವಿಜಯ್ ವರ್ಮಾ ಲವ್ ಸ್ಟೋರಿ ನಿಜಾನಾ? ವಿಜಯ್ ತಮನ್ನಾರನ್ನು ಹೀಗೆ ಕರೆಯುತ್ತಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ತಾವು ಯಾರೊಂದಿಗಾದರೂ ಓಡಾಡಿದ್ರೆ ಸಾಕು ಅಅವರ ಬಗ್ಗೆ ಕೂಡಲೇ ಗಾಸಿಪ್‌ ಹರಿದಾಡುತ್ತದೆ.  ಕೆಲವರು ಆ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಕೆಲವರು ಗಂಭೀರವಾಗಿ ಪ್ರತಿಕ್ರಿಯಿಸುತ್ತಾರೆ. ಕೆಲವೊಮ್ಮೆ ಆ ವದಂತಿಗಳೂ ನಿಜವಾಗುವ ಸಾಧ್ಯತೆಗಳಿವೆ. ಕಳೆದ ಕೆಲವು ದಿನಗಳಿಂದ ಸ್ಟಾರ್ ಹೀರೋಯಿನ್ ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ.

ತಮನ್ನಾ ಇಂಡಸ್ಟ್ರಿಗೆ ಬಂದು 18 ವರ್ಷವಾದರೂ ತೆಲುಗು, ತಮಿಳು ಮತ್ತು ಹಿಂದಿ ಇಂಡಸ್ಟ್ರಿಯಲ್ಲಿ ಆಕೆಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. 33 ವರ್ಷ ಕಳೆದರೂ ಮದುವೆ ವಿಷಯ ಬಂದಿಲ್ಲ. ಇದುವರೆಗೂ ತಮನ್ನಾ ಬಗ್ಗೆ ಹೆಚ್ಚು ಗಾಸಿಪ್ ಬಂದಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದೆ.

ಇತ್ತೀಚೆಗೆ, ತಮನ್ನಾ ಮತ್ತು ವಿಜಯ್ ವರ್ಮಾ ಹಲವಾರು ಬಾರಿ ಮಾಧ್ಯಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಇಬ್ಬರೂ ಮುತ್ತು ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಇದಕ್ಕೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದು ಪ್ರೇಮ ಜೋಡಿ ಎಂದು ಬಾಲಿವುಡ್ ಹೇಳುತ್ತಿದೆ.

ತಮ್ಮನ್ನಾ ಪೋಸ್ಟ್‌ವೊಂದಕ್ಕೆ ವಿಜಯ್ ವರ್ಮಾ ಥ್ಯಾಂಕ್ಯೂ ಟೊಮ್ಯಾಟೋ ಎಂದು ರಿಪ್ಲೈ ಮಾಡಿದ್ದಾರೆ. ಅದರ ಪಕ್ಕದಲ್ಲಿ ಟೊಮೇಟೊ ಮತ್ತು ಹೂವಿನ ಚಿಹ್ನೆ ಇಟ್ಟುಕೊಂಡಿದ್ದರು. ವಿಜಯ್ ವರ್ಮಾ ತಮನ್ನಾ ಅವರನ್ನು ಟೊಮೆಟೊ ಎಂದು ಕರೆಯುತ್ತಾರಾ? ಇದರ ಅರ್ಥವೇನು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ. ಮತ್ತೊಮ್ಮೆ ತಮನ್ನಾ-ವಿಜಯ್ ವರ್ಮಾ ಲವ್ ಸ್ಟೋರಿ ಟಾಕ್ ಆಫ್ ದಿ ಟೌನ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!