Thursday, March 30, 2023

Latest Posts

‘ಒಟಿಪಿ ಬರದೇ ವೋಟ್ ಇಲ್ಲ’ ಮೊಬೈಲ್ ಟವರ್‌ಗಾಗಿ ವಿನೂತನ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರಿನ ಕಳಸ ತಾಲೂಕಿನ ಬಲಿಗೆ, ಮೆಡಸಿನ ಹ್ಯಾಡ ಕಾಡಂಚಿನ ಗ್ರಾಮಸ್ಥರು ಮೊಬೈಲ್ ಟವರ್‌ಗಾಗಿ ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.

ನಮಗೆ ಭರವಸೆ ಬೇಡ, ಟವರ್ ಬೇಕ. ಒಟಿಪಿ ಬರದೇ ವೋಟ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಗ್ರಾಮಗಳಲ್ಲಿ ಟವರ್ ಇಲ್ಲದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆಗೂ ಮುನ್ನ ಟವರ್ ಹಾಕಿಸಿಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ ಆದರೆ ಇದು ಇನ್ನೂ ನಿಜವಾಗಿಲ್ಲ.

ದಶಕಗಳಿಂದ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಈ ನೂತನ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೂತನವಾಗಿ ಆರಂಭಿಸಿದ್ದು, ನಾಯಕರುಗಳ ಗಮನಕ್ಕೆ ತರಲು ಮುಂದಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!