ಹೊಸದಿಗಂತ ಡಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಜ.31ರವರೆಗೆ ವಿಸ್ತರಿಸಿದೆ.
ಈ ಹಿಂದೆ ವಿಧಿಸಲಾದ ನೈಟ್ ಕರ್ಫ್ಯೂ ಜ.31ರವರೆಗೆ ಮುಂದುವರೆಯಲಿದ್ದು, ಇನ್ನು ಜ.16ರಂದು ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಸರ್ಕಾರ ತಿಳಿಸಿದೆ.
ಜ.14ರಿಂದ ಜ.18ರವರೆಗೆ ಧಾರ್ಮಿಕ ಸ್ಥಳಗಳಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೊಂಗಲ್ ಹಬ್ಬದ ಸಲುವಾಗಿ ಶೇ.75ರಷ್ಟು ಸೀಟಿಂಗ್ ನೊಂದಿಗೆ ಜನರು ಅಂತರ್ ಜಿಲ್ಲೆ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು.
ತಮಿಳುನಾಡಿನ ಎಲ್ಲಾ ಶಾಲೆಗಳಲ್ಲಿನ 1ರಿಂದ 9ನೇ ತರಗತಿಗಳಿಗೆ ಜ.31ರವರೆಗೆ ಶಾಲೆ ಮುಚ್ಚಲಾಗಿರುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇನ್ನುಳಿದಂತೆ ಬಿಇ, ಪಾಲಿಟೆಕ್ನಿಕ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ರಜೆ ಘೋಷಿಸಲಾಗಿದೆ.
10, 11, 12 ಹಾಗೂ ವೈದ್ಯಕೀಯ ಮತ್ತು ಪಶು ವೈದ್ಯಕೀಯ ವಿಜ್ಞಾನ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ.
ತಮಿಳುನಾಡಿನಲ್ಲಿ ಒಂದೇ 12,895 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 51,335ಕ್ಕೆ ಏರಿಕೆಯಾಗಿದೆ.