ಹೊಸ ದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನ ಕೆಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿದಿರುವ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು, ತಿರುನಲ್ವೇಲಿಯ ಮಣಿಮುತುರ್ ಅಣೆಕಟ್ಟಿನಿಂದ 1,000 ಕ್ಯುಬಿಕ್ ಮೀಟರ್ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.
ಈ ಅಣೆಕಟ್ಟೆಯ ಗರಿಷ್ಟ ಸಂಗ್ರಹದ ಮಿತಿ 118 ಅಡಿಗಳಾಗಿದ್ದು, ಶನಿವಾರ ರಾತ್ರಿಯೇ ಈ ಮಿತಿಯನ್ನು ಮುಟ್ಟಿದ್ದರಿಂದ ನೀರು ಹೊರಬಿಡಲಾಗುತ್ತಿದೆ.
ತೂತುಕುಡಿ, ತಿರುನಲ್ವೇಲಿ, ತೆಂಕಾಸಿ ಮತ್ತು ಕನ್ಯಾಕುಮಾರಿಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಪ್ರವಾಹ ಕಾರಣದಿಂದ ಈವರೆಗೆ 35 ಮಂದಿ ಮೃತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳ ರಕ್ಷಣಾ ತಂಡಗಳು ಪರಿಹಾರ ಕಾರ್ಯಾಚರಣೆಗೆ ಧುಮುಕಿವೆ. ಭಾರತೀಯ ವಾಯುಸೇನೆ ಸಹ ಪ್ರವಾಹಸಂತ್ರಸ್ತರನ್ನು ರಕ್ಷಿಸುವ ಹಾಗೂ ಆಹಾರಸಾಮಗ್ರಿಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.