ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉತ್ತರಾಖಂಡದ ಉತ್ತರಕಾಶಿಯಲ್ಲಿ ಸುರಂಗ ನಿರ್ಮಾಣದ ವೇಳೆ ಕುಸಿತ ಉಂಟಾಗಿ ಎರಡು ವಾರಗಳಿಗೂ ಹೆಚ್ಚು ಕಾಲ ಕಾರ್ಮಿಕರು ಅಲ್ಲಿ ಸಿಲುಕಿಕೊಂಡಿದ್ದು ಹಾಗೂ ನಂತರ ಅವರನ್ನೆಲ್ಲ ಯಶಸ್ವಿಯಾಗಿ ಹೊರತೆಗೆದಿರುವುದು ಇತಿಹಾಸ. ಇದೀಗ ಅಲ್ಲಿನ ಸುರಂಗ ಕುಸಿತಕ್ಕೆ ಕಾರಣವಾದ ಅಂಶಗಳನ್ನು ಪ್ರಾಥಮಿಕ ತನಿಖಾ ವರದಿ ಪತ್ತೆ ಹಚ್ಚಿದ್ದು, ಕೆಲವು ವಿವರಗಳು ಮಾಧ್ಯಮಗಳಲ್ಲಿ ವರದಿಗಳಾಗಿವೆ.
- ಯೋಜನೆಯ ಮಾರ್ಗದ ಸಾಲನ್ನು ಯೋಜಿಸುವಲ್ಲಿ ಸಹ ತಪ್ಪಾಗಿತ್ತು ಎಂದು ವರದಿ ಹೇಳಿದೆ. ಹೀಗೆ ಮಾರ್ಗ ಜೋಡಣೆ ವ್ಯತ್ಯಾಸವಾದಾಗ ಮರುಜೋಡಣೆ ರಚಿಸಲಾಗುತ್ತದೆ.
- ಈ ರಿಪ್ರೊಫೈಲಿಂಗ್ ಅಥವಾ ಮರುಜೋಡಣೆ ಕಾರ್ಯದಲ್ಲಿ ಗುತ್ತಿಗೆದಾರರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಿರಲಿಲ್ಲ ಹಾಗೂ ಪೂರಕ ಉಪಕರಣಗಳನ್ನು ಹೊಂದಿರಲಿಲ್ಲ.
- ಕೆಲವು ಕೆಲಸಗಳಿಗೆ ಬೇಕಾದ ಪೂರ್ವಾನುಮತಿಗಳನ್ನು ಪಡೆದಿರಲಿಲ್ಲ
- ಮರುಜೋಡಣೆ ಕೆಲಸಗಳಲ್ಲಿ, ಈ ಹಿಂದೆ ಆ ಪ್ರದೇಶದಲ್ಲಿ ಆಗಿರುವ ಕುಸಿತವೇ ಇತ್ಯಾದಿಗಳ ಮಾಹಿತಿ ಪಡೆದಿರಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕಿರುತ್ತದೆ. ಆ ಕೆಲಸ ಆಗಿಲ್ಲ ಎಂಬುದನ್ನು ವರದಿ ಹೇಳಿದೆ.