Wednesday, December 6, 2023

Latest Posts

ಜಲ್ಲಿಕಟ್ಟು ಆಚರಣೆಗೆ ತಮಿಳುನಾಡು ಸರಕಾರದಿಂದ ಸಮ್ಮತಿ: ಮಾರ್ಗಸೂಚಿ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಹೆಚ್ಚುತ್ತಿರುವ ನಡುವೆ ತಮಿಳುನಾಡು ಸರ್ಕಾರ ಸೋಮವಾರ ಜಲ್ಲಿಕಟ್ಟು ಕಾರ್ಯಕ್ರಮಗಳಿಗೆ ಮಾರ್ಗಸೂಚಿ(SOPs)ಗಳನ್ನು ಬಿಡುಗಡೆ ಮಾಡಿದೆ.

ಈ ಪ್ರಕಾರ, ಕೇವಲ 150 ಪ್ರೇಕ್ಷಕರಿಗೆ ಅಥವಾ ಒಟ್ಟು ಆಸನ ಸಾಮರ್ಥ್ಯದ 50% ಅವಕಾಶ ನೀಡಲಾಗಿದೆ. ಇನ್ನು ಭಾಗಿಯಾಗಲು ಎರಡು ಕೋವಿಡ್-19 ಲಸಿಕೆ ಆಗಿರಬೇಕು ಅಥವಾ48 ಗಂಟೆಗಳಿಗಿಂತ ಮೊದಲ ನೆಗೆಟಿವ್ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯವಾಗಿರಬೇಕು ಎಂದು ತಿಳಿಸಿದೆ.

ಇದರ ಜೊತೆಗೆ ತಮಿಳುನಾಡಿನಲ್ಲಿ ರಾಜ್ಯದ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆಗಳನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಎಂ ಎಂಕೆ ಸ್ಟಾಲಿನ್ ಅವರೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಹೇಳಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಪ್ರಸ್ತುತ, ಅಧ್ಯಯನ ರಜೆಗಾಗಿ ಕಾಲೇಜುಗಳನ್ನು ಮುಚ್ಚಲಾಗಿದೆ ಮತ್ತು ಯಾವುದೇ ಸಂಸ್ಥೆಗಳು ತೆರೆದಿರುವ ಬಗ್ಗೆ ದೂರುಗಳಿದ್ದರೆ, ಅವುಗಳನ್ನು ಮುಚ್ಚಲು ಕೇಳಲಾಗುತ್ತದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!