VIRAL VIDEO| ಬಸ್‌ ಅಂದ್ರೆ ಇಷ್ಟೊಂದು ಪ್ರೀತಿನಾ? ನಿನ್ನ ಮನಸ್ಸು ತುಂಬಾ ಒಳ್ಳೆಯದು ಬಾಸೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರಿಗೆ ತಾವು ಓಡಿಸುವ ಬಸ್ ಗಳ ಮೇಲೆ ಪ್ರೀತಿ ಇರಲ್ವಾ? ಅಯ್ಯೋ ದಿನ ಇದೇ ಬಸ್‌, ಇದೇ ಕ್ಲಚ್‌, ಇದೇ ಗೇರ್‌, ಇದೇ ಸ್ಟೇರಿಂಗ್‌ ಎಂದು ಬೇಜಾರುಪಡುವವರು ಇದ್ದಾರೆ. ಇಂಥವರ ನಡುವೆ ತಮಿಳುನಾಡಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಚಾಲಕ ಮಾಡಿದ್ದನ್ನು ನೋಡಿದರೆ ನಿಜ ಅನ್ನಿಸುತ್ತದೆ.

ಬಸ್ ಚಾಲಕನೊಬ್ಬ ಹಲವು ವರ್ಷಗಳಿಂದ ತಾನು ಓಡಿಸಿದ ಕಂಪನಿಯ ಬಸ್ಸನ್ನು ತಬ್ಬಿಕೊಂಡು ಸ್ಟೀರಿಂಗ್ ಗೆ ಮುತ್ತಿಕ್ಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಿವೃತ್ತಿಯಾಗುತ್ತಿರುವುದರಿಂದ ಬಸ್ಸಿನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.  ಬಸ್ಸನ್ನು ತಬ್ಬಿ, ಸ್ಟೀರಿಂಗ್ ಗೆ ಮುತ್ತಿಕ್ಕಿ, ಕ್ಲಚ್, ಗೇರ್, ಬ್ರೇಕನ್ನು ಅತ್ಯಂತ ಪ್ರೀತಿಯಿಂದ ಕೈಯಿಂದ ಮುಟ್ಟಿ ಕಣ್ಣೀರು ಹಾಕಿದರು.

ಮುತ್ತುಪಾಂಡಿ ಅವರು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯಿಂದ ನಿವೃತ್ತರಾಗಿದ್ದಾರೆ. 60 ವರ್ಷ ಚಾಲಕನಾಗಿ ಮುತ್ತುಪಾಂಡಿ ಬಸ್‌ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. 60 ವರ್ಷಗ ಕಳೆದಿವೆ, ಈ ಕಂಪನಿಗೆ ಋಣ ತೀರಿಸುವ ಸಮಯ ಬಂದಿದೆ ಎಂದು ಕಣ್ತುಂಬಿಕೊಂಡರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!