Saturday, July 2, 2022

Latest Posts

ತಮಿಳುನಾಡು ಮಹಿಳೆಯ ಮೇಲಿನ ಲೈಂಗಿಕ ಅಪರಾಧಗಳ ರಾಜಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಲವ್ ಜಿಹಾದ್ ಘಟನೆಗಳು ಸೇರಿದಂತೆ ಹುಡುಗಿಯರು ಮತ್ತು ಯುವತಿಯರ ಮೇಲಿನ ಹಲ್ಲೆಗಳು ಪೋಷಕರಲ್ಲಿ ಆತಂಕ ತಂದಿದೆ. ಕಾಮುಕರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ಪೂರೈಸಲು ಎಳೆಯ ಮಕ್ಕಳನ್ನೂ ಬಿಡುತ್ತಿಲ್ಲ. ಭಾರತದಲ್ಲಿ ತಮಿಳುನಾಡು ‘ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳ ರಾಜಧಾನಿ’ಯಾಗಲಿದೆ.

ಮಾ. 25ರಂದು 13ರ ಹರೆಯದ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ಮೇಲೆ ಮೂರು ತಿಂಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ ಅಬ್ದುಲ್ಲಾ, ಅಕ್ಬರ್, ಗೌತಮ್, ಬಾಬು ಮತ್ತು ಲಕ್ಷ್ಮಣ್ ಎಂಬುವರನ್ನು ಅಂಬತ್ತೂರು ಪೊಲೀಸರು ಬಂಧಿಸಿದ್ದರು. ಆರೋಪಿಗಳು ತಡರಾತ್ರಿ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಬೀಚ್‌ನಲ್ಲಿ ಗೆಳೆಯನ ಜೊತೆಗಿದ್ದ ಯುವತಿ
ಮಾ. 23ರಂದು ರಾಮನಾಥಪುರದ ಮುಕ್ಕಯ್ಯೂರ್ ಬೀಚ್‌ನಲ್ಲಿ ತನ್ನ ಗೆಳೆಯನ ಜೊತೆಯಲ್ಲಿದ್ದಾಗ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಗ್ಯಾಂಗ್ ರೇಪ್ ಅನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಸಂತ್ರಸ್ತೆಯ ಬಳೆ ಮತ್ತು ಮೊಬೈಲ್ ಅನ್ನು ಕಸಿದುಕೊಳ್ಳಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಆದಾಗ್ಯೂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ಆರೋಪಿಗಳ ಮೇಲೆ ಸೆಲ್ ಫೋನ್ ಕದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆಯೇ ಹೊರತು ಅತ್ಯಾಚಾರದ ಪ್ರಕರಣವಲ್ಲ.

ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ
ಮಾ. 16 ರಂದು ವೆಲ್ಲೂರು ಸಿಎಂಸಿಯಲ್ಲಿನ ಮಹಿಳಾ ವೈದ್ಯೆಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಚಾಕು ತೋರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ವೈದ್ಯೆಯ ಸಹೋದ್ಯೋಗಿಗಳಿಬ್ಬರು ಆರೋಪಿಗಳಿಗೆ ಸಾಥ್ ನೀಡಿದ್ದರು. ಬಿಹಾರದಲ್ಲಿರುವ ತನ್ನ ಊರಿಗೆ ಮರಳಿದ ಬಳಿಕ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಐವರನ್ನೂ ಬಂಧಿಸಲಾಗಿದೆ. ಇದು ಸಂವೇದನಾಶೀಲ ದಿಲ್ಲಿ ನಿರ್ಭಯಾ ಘಟನೆಯೊಂದಿಗೆ ಗಮನಾರ್ಹ ಹೋಲಿಕೆ ಹೊಂದಿದೆ. ಇಬ್ಬರು ವ್ಯಕ್ತಿಗಳು ಬೀದಿ ಕಾಳಗ ನಡೆಸಿ, ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ವೆಲ್ಲೂರ್ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಅತ್ಯಾಚಾರ ಮತ್ತು ಕಳ್ಳತನ ಪ್ರಕರಣವನ್ನು ಒಪ್ಪಿಕೊಂಡರು. ತಡರಾತ್ರಿ ಸಿನಿಮಾ ಮುಗಿಸಿ ತನ್ನ ಸಹೋದ್ಯೋಗಿಯೊಂದಿಗೆ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಕೌನ್ಸಿಲರ್‌ನಿಂದ ಬಾಲಕಿಗೆ ಹಲ್ಲೆ
ಕೆಲ ದಿನಗಳ ಹಿಂದೆ ವಿಸಿಕೆ ಕೌನ್ಸಿಲರ್ ವೀರಸ್ವಾಮಿ (೪೭) ಗುಣರಮನಲ್ಲೂರು ಸರಕಾರಿ ಶಾಲೆಯಿಂದ ವಾಪಸಾಗುತ್ತಿದ್ದ 2ನೇ ತರಗತಿ ಬಾಲಕಿಯನ್ನು ಅಪಹರಿಸಿದ್ದ. ಬಾಲಕಿಗೆ ಕೆಲವು ತಿನಿಸುಗಳನ್ನು ಖರೀದಿಸಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ. ಇದೀಗ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ದಲಿತ ಯುವತಿಯ ಮೇಲೆ ನಿರಂತರ ಅತ್ಯಾಚಾರ
ಮಾ. 22 ರಂದು ವಿರುದುನಗರ ಜಿಲ್ಲೆಯ 22 ವರ್ಷದ ದಲಿತ ಯುವತಿಯ ಮೇಲೆ ಇಬ್ಬರು ಡಿಎಂಕೆ ಕಾರ್ಯಕರ್ತರು ಮತ್ತು ನಾಲ್ವರು ಬಾಲಾಪರಾಧಿಗಳು ಸೇರಿದಂತೆ 8 ಮಂದಿ ವ್ಯಕ್ತಿಗಳು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಲಾಗಿದೆ. ಕಳೆದ ವಾರ ಪಲ್ಲಡಂ ಬಳಿ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಿಎಂಕೆ ಕಾರ್ಯಕರ್ತ ಮೇಸನ್ ಶಿವಕುಮಾರ್ (50) ಅವರನ್ನು ಬಂಧಿಸಲಾಗಿದೆ.

ತಬ್ಬಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ
ಮಧುರೈ ವಲೈಯಂಕುಲಂನಲ್ಲಿ ತಾಯಿಯಿಲ್ಲದ 16 ವರ್ಷ ಪ್ರಾಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಡಿಎಂಕೆ ಸ್ಥಳೀಯ ಕಾರ್ಯಾಧ್ಯಕ್ಷ ವೀರನನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಆನ್ಲೈನ್ ಶಿಕ್ಷಣವನ್ನು ಮುಂದುವರಿಸಲು ಬಾಲಕಿ ಮತ್ತು ಅವಳ ಸಹೋದರನಿಗೆ ಸೆಲ್ ಫೋನ್ ಖರೀದಿಸಿ ಕೊಟ್ಟಿದ್ದ. ನಂತರ ವಿದ್ಯಾರ್ಥಿನಿಯನ್ನು ಸಂಪರ್ಕಿಸಿ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಕಿರುಕುಳ ನೀಡಿ, ಅಂತಿಮವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತಿರುಚ್ಚಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 41 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮಾಡೆಲ್ ಜೈದ್‌ನಿಂದ ಲವ್ ಜಿಹಾದ್
ಮಾಡೆಲ್ ಮೊಹಮ್ಮದ್ ಜೈದ್ 20ಕ್ಕೂ ಹೆಚ್ಚು ಯುವತಿಯರಿಗೆ ಆಮಿಷವೊಡ್ಡಿದ್ದ. ನಂತರ ಸಂತ್ರಸ್ತ ಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಚೆನ್ನೈನ ವಿಐಪಿಗಳಿಗೆ ನೀಡುತ್ತಿದ್ದ. ಮಾ. 7ರಂದು ಮಧುರೈ ಬಳಿ 17ರ ಹರೆಯದ ಹುಡುಗಿಯೊಬ್ಬಳು ಲವ್ ಜಿಹಾದ್‌ಗೆ ಬಲಿಯಾಗಿದ್ದಳು. ಫೆ. 14ರಂದು ಸಾಮೂಹಿಕ ಅತ್ಯಾಚಾರಗೊಳಗಾದ ಯುವತಿಯೊಬ್ಬಳಿಗೆ ಮಾದಕ ದ್ರವ್ಯದೊಂದಿಗೆ ವಿಷ ಕುಡಿಸಲಾಯಿತು. ಆಕೆ ಮಾ. 6 ರಂದು ನಿಧನಳಾದಳು. ಸೇಲಂ ಬಳಿಯ ಮತ್ತೊಬ್ಬ ಪಿಯುಸಿ ವಿದ್ಯಾರ್ಥಿನಿ ಜ. 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ರಾಮನಾಥಪುರದ 25 ವರ್ಷದ ಇಂಜಿನಿಯರಿಂಗ್ ಪದವೀಧರ ಯುವತಿ ಕಳೆದ ವರ್ಷ ಡಿಸೆಂಬರ್ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ತೇಣಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕ ಶಾಜಹಾನ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ತಮಿಳುನಾಡಿನ ಲವ್ ಜಿಹಾದ್ ಪಟ್ಟಿ ಅಪೂರ್ಣವಾಗಿದೆ.

ತಮಿಳುನಾಡು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ರಾಜ್ಯ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದೆ ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ. ಆದರೆ ಪ್ರಸ್ತುತ ವಿದ್ಯಮಾನಗಳು ಪೆರಿಯಾರಿಸಂನ ಮುಖವಾಡದ ಹಿಂದೆ ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಒಟ್ಟಿನಲ್ಲಿ ಈ ಎಲ್ಲ ಪ್ರಕರಣಗಳು ಡಿಎಂಕೆಯ ಆಡಳಿತದಲ್ಲಿ, ರಾಜ್ಯವು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಕನ್ನಡಿ ಹಿಡಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss