ಟ್ಯಾಂಕರ್-ಬೈಕ್ ಡಿಕ್ಕಿ: ಯುವಕ ಸಾವು

ಹೊಸದಿಗಂತ ವರದಿ, ಕಲಬುರಗಿ:

ದ್ವೀಚಕ್ರ ವಾಹನದ ಮೇಲೆ ಪ್ರೇಮಿಗಳಿಬ್ಬರು ಜಾಲಿ ಡ್ರೈವ್ ಹೋದ ಸಂದರ್ಭದಲ್ಲಿ ರಭಸವಾಗಿ ಬಂದ ಟ್ಯಾಂಕರ್, ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ (ಪ್ರೇಮಿ) ಸಾವಿಗೀಡಾದ ಘಟನೆ ನಡೆದಿದೆ.

ಸೋಮವಾರ ಕಲಬುರಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹದ ಬಳಿ ಈ ಅವಘಡ ಸಂಭವಿಸಿದ್ದು, ಸುದಶ೯ನ (23) ವಯಸ್ಸಿನ ಯುವಕ ಸಾವಿಗೀಡಾಗಿದ್ದಾನೆ.

ಇನ್ನೂ ಇವನ ಜೊತೆಯಲ್ಲಿ ಇದ್ದ ಯುವತಿ ಶೃತಿ,ಗೆ ಗಂಭೀರವಾಗಿ ಗಾಯವಾದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಸಂಚಾರಿ ಪೋಲಿಸ್,ರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ಸಂಚಾರಿ ಒನ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!