ಹೊಸದಿಗಂತ ವರದಿ ದೇವರಹಿಪ್ಪರಗಿ:
ದೇವರಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ಸಮೀಪವಿರುವ ಹಡಗಿನಾಳ ಕ್ರಾಸ್ ಹತ್ತಿರ ರಸ್ತೆ ಮೇಲೆ ನಿಂತ ಟ್ರ್ಯಾಕ್ಟರ್ ಗೆ ಟಂಟಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕಲಕೇರಿ ತಾಂಡಾ ಗ್ರಾಮದ ಥಾವರುರ ದೀಪು ಚವ್ಹಾಣ (60) ಎಂದು ಗುರುತಿಸಲಾಗಿದೆ.
ಕಲಕೇರಿಯಿಂದ ಗುಬ್ಬೇವಾಡ ಗ್ರಾಮಕ್ಕೆ ಕೆಲಸ ಮಾಡಲು ೬ಜನ ಕೂಲಿ ಕಾರ್ಮಿಕರೊಂದಿಗೆ ಟಂಟಂ ವಾಹನ ಮೂಲಕ ಹೋಗುವ ದಾರಿ ಮಧ್ಯೆ ನಿಂತ ಟ್ರಾಕ್ಟರ್ ಗೆ ಗುದ್ದಿದ ಪರಿಣಾಮ ಒಬ್ಬ ಕೂಲಿ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಹಾಗೂ ಹಲವಾರು ಗಾಯಗೊಂಡ ವಿಜಯಪುರ ಭಾಗ್ಯವಂತಿ ಖಾಸಗಿ ಆಸ್ಪತ್ರೆ ಹಾಗೂ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ದಾಖಲಿಸಲಾಗಿದೆ.
ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ, ಪ್ರಕರಣ ದಾಖಲಾಗಿದೆ.



