ಹೊಸದಿಗಂತ ಡಿಜಿಟಲ್ ಡೆಸ್ಕ್
ಉಗ್ರ ಸಂಘಟನೆ ಲಷ್ಕರ್ -ಎ-ತೊಯ್ಬಾಯಿಂದ ಮತ್ತೊಮ್ಮೆ ಕಣಿವೆಯಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರಿಗೆ ಬೆದರಿಕೆಗಳು ಬಂದಿವೆ.
ಲಷ್ಕರ್ -ಎ-ತೊಯ್ಬಾ ನಿರ್ವಹಿಸುತ್ತಿರುವ Kashmir Fight ಎಂಬ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಕಣಿವೆಯಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರಿಗೆ ಬೆದರಿಕೆಗಳನ್ನೊಡ್ಡಿದೆ ಎಂದು ರಿಪಬ್ಲಿಕ್ ವರ್ಲ್ಡ್ ಡಾಟ್ ಕಾಮ್ ವರದಿ ಮಾಡಿದೆ.
ಈ ಉಗ್ರ ಗುಂಪು 56 ಕಾಶ್ಮೀರಿ ಪಂಡಿತ ಉದ್ಯೋಗಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಲಾಗುತ್ತದೆ ಎಂದುಹೇಳಿವೆ.
ಇದೀಗಕಾಶ್ಮೀರಿ ಪಂಡಿತರು ಭಯಭೀತರಾಗಿದ್ದು ಇಂಥಾ ಬೆದರಿಕೆ ಪತ್ರವು ಭಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಪಟ್ಟಿಯಲ್ಲಿ ಉದ್ಯೋಗಿಗಳ ಹೆಸರನ್ನು ನಮೂದಿಸಲಾಗಿದೆ. ಇದು ತುಂಬಾ ಆಘಾತಕಾರಿ ಸಂಗತಿ. ನಾವು ಈಗಾಗಲೇ ಕಣಿವೆಯಲ್ಲಿ ಭಯದಿಂದ ಬದುಕುತ್ತಿದ್ದೇವೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚಿಸಬೇಕು. ಸುಮಾರು 7 ತಿಂಗಳಿನಿಂದ ಸ್ಥಳಾಂತರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು ಕಾಶ್ಮೀರಿ ಪಂಡಿತರೊಬ್ಬರು ಹೇಳಿದ್ದಾರೆ.
ಅಂದಹಾಗೆ Kashmir Fight ಎಂಬ ವೆಬ್ ಸೈಟ್ನ್ನು ಭಾರತ ಸರ್ಕಾರವು ಈ ಹಿಂದೆ ನಿಷೇಧಿಸಿತ್ತು.ಈ ವೆಬ್ ಸೈಟ್ ಕೆಲವು ಪತ್ರಕರ್ತರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಭದ್ರತಾ ಪಡೆಗಳ ಮಾಹಿತಿದಾರರು ಎಂದು ಪ್ರಚಾರ ಮಾಡುತ್ತಿದ್ದಾರೆ.ಈ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಯಿಂದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಯಿತು. ಈ ವೆಬ್‌ಸೈಟ್ ಕಾಶ್ಮೀರ ಕಣಿವೆಯಲ್ಲಿ ವಾಸಿಸುವವರನ್ನು ಗುರಿಯಾಗಿಸಲು ಮತ್ತು ಮಾನಹಾನಿ ಮಾಡಲು ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.