ಟೀಂ ಇಂಡಿಯಾಕ್ಕೆ ವಿಲನ್ ಅದ ಒಂದು ವಿಕೆಟ್: ಬಾಂಗ್ಲಾದೇಶಕ್ಕೆ ಗೆಲುವಿನ ಖುಷಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟೀಂ ಇಂಡಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ಬಾಂಗ್ಲಾ ಗೆಲುವು ಸಾಧಿಸಿದೆ. ಅಂತಿಮ ವಿಕೆಟ್‌ ನಲ್ಲಿ ಮಹದಿ ಹಸನ್ ಹಾಗೂ ಮಸ್ತಾಫಿಜುರ್ ರಹೆಮಾನ್ ಬ್ಯಾಟಿಂಗ್ ಗೆಲುವಿನ ದಡ ಸೇರಿಸಿತು.

ಟೀಮ್ ಇಂಡಿಯಾ ನೀಡಿದ 187 ರನ್ ಸುಲಭ ಟಾರ್ಗೆಟ್ ಪಡೆದ ಬಾಂಗ್ಲಾದೇಶ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಮೊದಲ ಎಸೆದಲ್ಲೇ ನಜ್ಮುಲ್ ಹುಸೈನ್ ವಿಕೆಟ್ ಪತನಗೊಂಡಿತು. ನಜ್ಮುಲ್ ಡಕೌಟ್ ಆದರು. ನಾಯಕ ಲಿಟ್ಟನ್ ದಾಸ್ ಹಾಗೂ ಅನಾಮುಲ್ ಹಕ್ ಜೊತೆಯಾಟಕ್ಕೆ ಬಾಂಗ್ಲಾದೇಶ ಚೇತರಿಸಿಕೊಂಡಿತು. ಲಿಟ್ಟನ್ ದಾಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು ಆದರೆ ಅನಾಮುಲ್ ಹಕ್ 14 ರನ್ ಸಿಡಿಸಿ ಔಟಾದರು.

ಶಕೀಬ್ ಅಲ್ ಹಸನ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಲಿಟ್ಟನ್ ದಾಸ್ ಬಾಂಗ್ಲಾದೇಶಕ್ಕೆ ಆಸರೆಯಾದರು. 63 ಎಸೆತದಲ್ಲಿ 41 ರನ್ ಸಿಡಿಸಿ ಲಿಟ್ಟನ್ ದಾಸ್, ವಾಶಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು. ಶಕೀಬ್ ಅಲ್ ಹಸನ್ 29 ರನ್ ಸಿಡಿಸಿ ಔಟಾದರು. ಮೊಹಮ್ಮದುಲ್ಲಾ 14 ರನ್ ಸಿಡಿಸಿ ಔಟಾದರು. ಆಫಿಫ್ ಹೂಸೈನ್ ಕೇವಲ 6 ರನ್ ಸಿಡಿಸಿ ಔಟಾದರು.

135 ರನ್‌ಗಳಿಗೆ ಬಾಂಗ್ಲಾದೇಶ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಸನ್ ಮೊಹಮ್ಮದ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಆದರೆ ಮುಸ್ತಾಫಿಜುರ್ ರೆಹಮಾನ್ ಹಾಗೂ ಮೆಹದಿ ಹಸನ್ ಮಿರಾಜ್ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಇದು ಟೀಂ ಈಂಡಿಯಾ ತಲೆನೋವಿಗೆ ಕಾರಣವಾಯಿತು. ಬಾಂಗ್ಲಾದೇಶ 1 ವಿಕೆಟ್ ರೋಚಕ ಗೆಲುವು ಸಾಧಿಸಿತು. ಮೆಹದಿ ಹಸನ್ ಅಜೇಯ 37 ರನ್ ಸಿಡಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ 3, ಕುಲ್ದೀಪ್ ಸೇನ್ 2 , ವಾಶಿಂಗ್ಟನ್ ಸುಂದರ್ 2, ಶಾರ್ದೂಲ್ ಠಾಕೂರ್ 1 ಹಾಗೂ ದೀಪಕ್ ಚಹಾರ್ 1 ವಿಕೆಟ್ ಕಬಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!