ಕೆನಡಾದಲ್ಲಿ ಗುಂಡಿಕ್ಕಿ ಭಾರತ ಮೂಲದ 21 ವರ್ಷದ ಸಿಖ್ ಮಹಿಳೆ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ 21 ವರ್ಷದ ಭಾರತ ಮೂಲದ ಸಿಖ್ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಟಾರಿಯೊ ಪ್ರಾಂತ್ಯದ ಮಿಸ್ಸಿಸೌಗಾ ನಗರದಲ್ಲಿ ಶನಿವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಬ್ರಾಂಪ್ಟನ್‌ನ ಪವನ್‌ಪ್ರೀತ್ ಕೌರ್ ಎಂದು ಗುರುತಿಸಲಾದ ಯವತಿಯ ಮೇಲೆ ಹಗುಂಡುಹಾರಿಸಿ ಕೊಂದಿದ್ದಾರೆ ಎಂದು ಪೀಲ್ಸ್ ಪ್ರಾದೇಶಿಕ ಪೊಲೀಸರು ತಿಳಿಸಿದ್ದಾರೆ.
ಟೊರೊಂಟೊ ಸನ್ ಪತ್ರಿಕೆಯ ಪ್ರಕಾರ, ಗ್ಯಾಸ್ ಸ್ಟೇಷನ್‌ನ ಹೊರಗೆ ಗುಂಡು ಹಾರಿಸಿ ಕೌರ್ ಅವರನ್ನು ಕೊಲ್ಲಲಾಯಿತು. ರಾತ್ರಿ 10:39 ರ ಸುಮಾರಿಗೆ ಮಹಿಳೆಯೊಬ್ಬರಿಗೆ ಗುಂಡು ಹಾರಿಸಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದರು ಮತ್ತು ಘಟನಾ ಸ್ಥಳಕ್ಕೆ ಬಂದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಜೀವ ಉಳಿಸುವ ಕ್ರಮಗಳನ್ನು ಪ್ರಯತ್ನಿಸಲಾಯಿತು ಆದರೆ ಸಂತ್ರಸ್ತೆ ತನ್ನ ಗಾಯಗಳಿಗೆ ಬಲಿಯಾದಳು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದು ಉದ್ದೇಶ ಪೂರ್ವಕ ಹತ್ಯೆ  ಎಂದು ಪೊಲೀಸರು ನಂಬಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!