ಭಯೋತ್ಪಾದನೆಯನ್ನು ಟಾರ್ಗೆಟ್‌ ಮಾಡಿ ಎಂದರೆ ನನ್ನ ಟಾರ್ಗೆಟ್ ಮಾಡ್ತಾರೆ: ಕಾಂಗ್ರೆಸ್ ವಿರುದ್ಧ ಪ್ರದಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಂಗ್ರೆಸ್‌ ಅವರಲ್ಲಿ ಭಯೋತ್ಪಾದನೆಯನ್ನು ಟಾರ್ಗೆಟ್‌ ಮಾಡಿ ಎಂದರೆ, ಆಗಿನ ಕಾಂಗ್ರೆಸ್‌ ಸರ್ಕಾರ ನನ್ನನ್ನ ಟಾರ್ಗೆಟ್‌ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆ ಅಂಗವಾಗಿ ಖೇಡಾದಲ್ಲಿ ಮಾತನಾಡಿದ ಮೋದಿ, ವೋಟ್ ಬ್ಯಾಂಕ್ ರಾಜಕೀಯದ ಕಾರಣ ಕಾಂಗ್ರೆಸ್ ಭಯೋತ್ಪಾದಕರ ಬದಲಿಗೆ ತನ್ನನ್ನು ಗುರಿಯಾಗಿಸಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ಬಹಳ ಹಿಂದಿನಿಂದಲೂ ಭಯೋತ್ಪಾದನೆಯ ಗುರಿಯಾಗಿತ್ತು. ಸೂರತ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ಸ್ಫೋಟಗಳಲ್ಲಿ ಗುಜರಾತ್‌ನ ಜನರು ಸಾವನ್ನಪ್ಪಿದರು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಇತ್ತು, ನಾವು ಭಯೋತ್ಪಾದನೆಯನ್ನು ಗುರಿಯಾಗಿಸಲು ಹೇಳಿದ್ರೆ, ಅವರು ನನ್ನನ್ನು ಟಾರ್ಗೆಟ್‌ ಮಾಡಿದ್ದರು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಭಯೋತ್ಪಾದನೆಯನ್ನು ತನ್ನ ಮತಬ್ಯಾಂಕ್ ಆಗಿ ಪರಿಗಣಿಸಿದೆ. ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿರುವ ಹಲವಾರು ಪಕ್ಷಗಳೂ ಹುಟ್ಟಿಕೊಂಡಿವೆ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

2014 ರಲ್ಲಿ ನಿಮ್ಮ ಒಂದು ಮತದಿಂದ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಅವಕಾಶ ಸಿಕ್ಕಿತು . ಭಯೋತ್ಪಾದಕರು ನಮ್ಮ ಗಡಿಯ ಮೇಲೆ ದಾಳಿ ಮಾಡುವ ಮುನ್ನ ಸಾಕಷ್ಟು ಯೋಚಿಸಬೇಕು. ಆದರೆ ಕಾಂಗ್ರೆಸ್ ನಮ್ಮ ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸುತ್ತದೆ. ರಾಜ್ಯದ ಯುವಕರು 25 ವರ್ಷ ವಯಸ್ಸಿನವರು, ಕರ್ಫ್ಯೂ ಹೇಗಿರುತ್ತದೆ ಎಂದು ನೋಡಿಲ್ಲ. ನಾವು ಅವರನ್ನು ಬಾಂಬ್ ಸ್ಫೋಟದಿಂದ ರಕ್ಷಿಸಬೇಕು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಮಾತ್ರ ಇದನ್ನು ಮಾಡಬಹುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!