ಹಾಸನಾಂಬೆ ದೇವಿ ದರುಶನ ಪಡೆದ ತರುಣ್ ಸುಧೀರ್ ದಂಪತಿ: ದರ್ಶನ್ ಬಿಡುಗಡೆಗೆ ಪಾರ್ಥನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಅವರು ಇಂದು (ಅ.27) ಹಾಸನಾಂಬೆ ದೇವಿ ದರುಶನ ಪಡೆದಿದ್ದಾರೆ. ಪತ್ನಿ ಜೊತೆ ಹಾಸನಾಂಬೆ ದೇವಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತರುಣ್, ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ಎಂದು ದೇವಿ ಬಳಿ ಕೇಳಿಕೊಂಡಿದ್ದೇವೆ ಎಂದು ಮಾತನಾಡಿದರು.

ಮದುವೆ ಬಳಿಕ ಮೊದಲ ಬಾರಿಗೆ ಪತ್ನಿ ಸೋನಾಲ್ ಜೊತೆ ತರುಣ್ ಆಗಮಿಸಿ ಹಾಸನಾಂಬೆ ದೇವಿ ದರುಶನ ಪಡೆದು ಸಂತಸಪಟ್ಟಿದ್ದಾರೆ.

ಆದಷ್ಟು ಬೇಗ ದರ್ಶನ್ ಅವರು ಬಿಡುಗಡೆ ಆಗಲಿ ಎಂದು ಹಾಸನಾಂಬೆ ದೇವಿ ಬಳಿ ಕೇಳಿಕೊಂಡಿದ್ದೇನೆ. ಅವರು ಇದ್ದಿದ್ದರೆ ಈ ಬಾರಿ ಹಾಸನಾಂಬೆ ದೇವಿ ದರುಶನಕ್ಕೆ ಬರುತ್ತಿದ್ದರು. ಆದಷ್ಟು ಬೇಗ ಎಲ್ಲಾ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ. ನಾವು ಮದುವೆಯಾದ ನಂತರ ದೇವಿ ದರುಶನಕ್ಕೆ ಬಂದಿದ್ದೇವೆ ಅದು ನನಗೆ ವಿಶೇಷ. ಈ ತಾಯಿ ಹತ್ತಿರ ದರುಶನಕ್ಕೆ ಬಂದಾಗ ಮನಸ್ಸಿನಲ್ಲಿ ಇರೋದೆನ್ನೆಲ್ಲಾ ಒಮ್ಮೆಲೆ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಇಲ್ಲಿ ಒಂದು ವೈಬ್ರೇಷನ್ ಇದೆ. ಪ್ರತಿ ವರ್ಷ ನಾನು ಹಾಸನಾಂಬೆ ದೇವಿ ದರುಶನಕ್ಕೆ ಬರುತ್ತೇನೆ. ಕಳೆದ ವರ್ಷ ಶೂಟಿಂಗ್ ಇದ್ದಿದ್ದರಿಂದ ಬರಲು ಆಗಿರಲಿಲ್ಲ ಎಂದು ತರುಣ್ ಹೇಳಿದರು.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!