ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು
ಮೈದಾ ಹಿಟ್ಟು 1 ಕಪ್, ಚಿರೋಟಿ ರವೆ ಕಾಲುಕಪ್, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಸೋಡಾ ಒಂದು ಚಿಟಿಕೆ, ತುಪ್ಪ ಎರಡು ಟೀ ಸ್ಪೂನ್, ಈ ಪದಾರ್ಥಗಳನ್ನು ಒಂದು ಬೌಲ್‍ಗೆ ಹಾಕಿ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಮಾಡಿ ಅರ್ಧಗಂಟೆಗಳಕಾಲ ನೆನೆಯಲು ಬಿಡಿ.
ತುಪ್ಪ 2ಚಮಚ, ಜೀರಿಗೆ ಒಂದು ಚಮಚ, ಇಂಗು ಕಾಲು ಚಮಚ, ಗೋಡಂಬಿ ಚೂರು ಸ್ವಲ್ಪ, ಒಣದ್ರಾಕ್ಷಿ ಸ್ವಲ್ಪ, ತುರಿದ ಪನೀರ್ ಒಂದು ಕಪ್, ರುಚಿಗೆ ಬೇಕಾದಷ್ಟು ಉಪ್ಪು, ಸಕ್ಕರೆ ಒಂದು ಚಮಚ, ತುರಿದ ಶುಂಠಿ 2 ಚಮಚ, ಚೆಕ್ಕೆ ಲವಂಗ ಪುಡಿ ಅರ್ಧ ಚಮಚ, ಹಸಿಮೆಣಸಿನ ಕಾಯಿ 2.
ಮಾಡುವ ವಿಧಾನ:
ಬಾಣೆಲೆಗೆ ತುಪ್ಪ, ಜೀರಿಗೆ, ಇಂಗು, ಗೋಡಂಬಿ, ಒಣದ್ರಾಕ್ಷಿ, ಹಸಿಮೆಣಸಿನಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಫ್ರೈಮಾಡಿ. ತುರಿದ ಪನ್ನೀರ್, ಉಪ್ಪು, ಸಕ್ಕರೆ, ಶುಂಠಿ ತುರಿ, ಚೆಕ್ಕೆ ಲವಂಗದ ಪುಡಿ ಹಾಕಿ ಒಟ್ಟು ಮಿಶ್ರಮಾಡಿ ಫ್ರೈಮಾಡಿ. ಈ ಮೊದಲೇ ಮಿಶ್ರಮಾಡಿ ನೆನೆಯಲು ಬಿಟ್ಟ ಹಿಟ್ಟನ್ನು ಸಣ್ಣಗಾತ್ರದ ಉಂಡೆಗಳನ್ನಾಗಿ ಮಾಡಿ. ಪೂರಿ ಅಳತೆಯಲ್ಲಿ ಲಟ್ಟಿಸಿ. ಫ್ರೈಮಾಡಿದ ಮಸಾಲಾ ಮಿಶ್ರಣವನ್ನು ತುಂಬಿ ಮುಚ್ಚಿ. ಕಾದ ಎಣ್ಣೆಗೆ ಹಾಕಿ ಕರಿಯಿರಿ. ಚಟ್ನಿ ಹಾಗೂ ಸಾಸ್ ಜೊತೆಗೆ ಪನೀರ್ ಸಮೋಸ ರುಚಿ ರುಚಿಯಾಗಿರುತ್ತದೆ.