Monday, December 11, 2023

Latest Posts

ಬರ ಸಮೀಕ್ಷೆಗಾಗಿ ಇಂದು ರಾಜ್ಯಕ್ಕೆ ಕೇಂದ್ರದ ತಂಡ ಭೇಟಿ, ಅಧ್ಯಯನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ, ಕೇಂದ್ರದಿಂದ ಪರಿಹಾರವಾಗಿ ಆರು ಸಾವಿರ ಕೋಟಿ ರೂಪಾಯಿ ಕೇಳಲಾಗಿದೆ. ರಾಜ್ಯದ ಬರಪರಿಸ್ಥಿತಿಯನ್ನು ಅವಲೋಕಿಸಲು ಇಂದು ಕೇಂದ್ರದ ತಂಡ ಆಗಮಿಸಲಿದೆ.

ಹಿರಿಯ ಅಧಿಕಾರಿಗಳನ್ನೊಳಗೊಂಡ ಮೂರು ಕೇಂದ್ರ ತಂಡಗಳು ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಲಿವೆ.

ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಕೊಠಡಿಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಸಂಕ್ಷಿಪ್ತ ವಿವರ ಪಡೆದು ಜಿಲ್ಲೆಗಳಿಗೆ ತೆರಳಲಾಗುತ್ತದೆ.

ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಕೇಂದ್ರ ತಂಡದಲ್ಲಿರುವ ಅಧಿಕಾರಿಗಳು ಅಕ್ಟೋಬರ್ ೯ರಂದು ನವದೆಹಲಿಗೆ ತೆರಳುತ್ತಾರೆ, ಇದಕ್ಕೂ ಮುನ್ನ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!