ಹೊಸದಿಗಂತ ವರದಿ ಮಂಡ್ಯ :
ಟಾಟಾ ಏಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ 28 ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಮಣಿಗೆರೆ ಗೇಟ್ ಬಳಿ ನಡೆದಿದೆ.
ಮದ್ದೂರು ತಾಲೂಕು ತೊರೆಶೆಟ್ಟಿಹಳ್ಳಿ ಗ್ರಾಮದ ರೇಖಾಮಣಿ, ಮಾಯಮ್ಮ (55), ಸವಿತಾ (47), ಅರುಣ, ಮಂಜು, ಮಾಲಿನಿ, ಭಾಗ್ಯಮಣಿ, ಸುಶೀಲಾಮಣಿ, ಸುಗುಣಾ ಮಣಿ, ವರಲಕ್ಷ್ಮಿ, ರಾಜಮಣಿ, ಸಿದ್ದಲಿಂಗ ಅರಸು (60), ಪುಟ್ಟಮ್ಮ (56), ಯಶೋಧಮ್ಮ (61), ಶಿಲ್ಪಾವತಿ, ಸುರೇಖಾಮಣಿ, ಶಿಲ್ಪಾ, ಕಾಂತರಾಜು, ದುರ್ಗೇೀಶ್, ರಾಜೇಶ್, ಪ್ರಭುರಾಜ್, ನಾಗರಾಜ್, ಮಹದೇವು (50), ಕಾರಿನಲ್ಲಿದ್ದ ಚಂದನ್ ಸೇರಿದಂತೆ 28 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ತೊರೆಶೆಟ್ಟಿಹಳ್ಳಿ ಗ್ರಾಮದ ಮಾಯಮ್ಮ, ಸಿದ್ದಲಿಂಗ ಅರಸು ಸೇರಿದಂತೆ 22 ಮಂದಿ ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದರು.
ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಚಂದನ್ ಮತ್ತು ಐವರು ಪ್ರಯಾಣಿಸುತ್ತಿದ್ದ ಕಿಯಾ ಕಾರು ಮತ್ತು ಟಾಟಾ ಏಸ್ ನಡುವೆ ಮುಖಾ ಮುಖಿ ಡಿಕ್ಕಿಯಾಯಿತು. ನಂತರ ಟಾಟಾ ಏಸ್ ವಾಹನ ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.