ಸೆಪ್ಟೆಂಬರ್‌ ತಿಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕ ವಾಹನ ಮಾರಾಟ ದಾಖಲಿಸಿದೆ ಟಾಟಾ ಮೋಟರ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ತನ್ನ ಅತಿ ಹೆಚ್ಚು ದೇಶೀಯ ಪ್ರಯಾಣಿಕ ವಾಹನಗಳ ಮಾಸಿಕ ಮಾರಾಟವನ್ನು (PV) ಸಾಧಿಸಿದೆ. ಹಬ್ಬದ ಋತುವಿನಲ್ಲಿ ಕಂಪನಿಯ ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದು ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವುದರ ನಡುವೆ ಮಾಸಿಕವಾಗಿ ಹೆಚ್ಚಿನ ವಾಹನಗಳ ಮಾರಾಟವಾಗಿದೆ ಎಂದು ಕಂಪನಿ ಹೇಳಿಕೊಂಡಿರುವುದಾಗಿ ವರದಿಗಳು ಉಲ್ಲೇಖಿಸಿವೆ.

ಸೆಪ್ಟೆಂಬರ್ 2022 ರಲ್ಲಿ, ಪ್ರಯಾಣಿಕವಾಹನಗಳ ಮಾರಾಟವು 85 ಪ್ರತಿಶತದಷ್ಟು ಹೆಚ್ಚಾಗಿದ್ದು ಒಟ್ಟೂ 47,654 ಯುನಿಟ್‌ಗಳು ಮಾರಾಟಗೊಂಡಿವೆ. ಕಳೆದ ವರ್ಷದ ಇದೇ ತಿಂಗಳಲ್ಲಿ 25,730 ಪ್ರಯಾಣಿಕ ವಾಹನಗಳನ್ನು ಕಂಪನಿ ಮಾರಾಟ ಮಾಡಿತ್ತು.

ಮಾರಾಟಗೊಂಡಿರುವ ಎಲೆಕ್ಟ್ರಿಕ್‌ ವಾಹನಗಳಲ್ಲಿ ಎಲೆಕ್ಟ್ರಿಕ್‌ ವೆಹಿಕಲ್ (EV) ವಿಭಾಗ ಮತ್ತು ಆಂತರಿಕ ದಹನಕಾರಿ ಎಂಜಿನ್ (ICE) ವಿಭಾಗಗಳು ಸೇರಿದ್ದು ಸೆಪ್ಟೆಂಬರ್ 2022 ರಲ್ಲಿ EV ವಿಭಾಗದಲ್ಲಿ 239 ಪ್ರತಿಶತ ಮತ್ತು ICE ವಾಹನ ವಿಭಾಗದಲ್ಲಿ 78 ಶೇಕಡಾ ಬೆಳವಣಿಗೆಯನ್ನು ಕಂಡಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಒಟ್ಟೂ 3,655 ಯೂನಿಟ್ EV ಮತ್ತು 43,999 ICE ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಅದು ಉಲ್ಲೇಖಿಸಿದೆ.

ಟಿಯಾಗೊ ಇವಿ ಬಿಡುಗಡೆಯೊಂದಿಗೆ, ಕಂಪನಿಯು ದೇಶಾದ್ಯಂತ ಇವಿಗಳ ಸಾಮೂಹಿಕ ಅಳವಡಿಕೆಗೆ ಚಾಲನೆ ನೀಡಲು ಸಿದ್ಧವಾಗಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಶನಿವಾರ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!