ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 2024-25ನೇ ಸಾಲಿನ ಆರ್ಥಿಕ ಸಾಲಿನಲ್ಲಿ ಕೋವಿಡ್ ಗಿಂತಲೂ ಹಿಂದೆ ಕಡಿಮೆ ಪ್ರಯಾಣಿಕರು ರೈಲು ಸಂಚಾರ ಮಾಡಿದ್ದರೂ ಸಹ ರೈಲ್ವೆ ಇಲಾಖೆ ಮಾತ್ರ ಲಾಭ ಮಾಡಿಕೊಂಡಿದೆ.
ರೈಲ್ವೆ ಸಚಿವಾಲಯದಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಏಪ್ರಿಲ್ 1, 2024 ರಿಂದ ಮಾರ್ಚ್ 31, 2025 ರವರೆಗೆ ಭಾರತೀಯ ರೈಲ್ವೆಯಲ್ಲಿ ಒಟ್ಟು 715 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋವಿಡ್‌ಗಿಂತ ಮುಂಚಿನ 2019-20ನೇ ಆರ್ಥಿಕ ಸಾಲಿನಲ್ಲಿ ಒಟ್ಟು 808.57 ಕೋಟಿ ಜನರು ಪ್ರಯಾಣ ಮಾಡಿದ್ದರು. ಅಂದರೆ, ಕೋವಿಡ್ ಮುಂಚಿನ ಅವಧಿಗೂ ಕಳೆದ ಆರ್ಥಿಕ ಸಾಲಿಗೂ ಹೋಲಿಕೆ ಮಾಡಿದರೆ 93 ಕೋಟಿ ಪ್ರಯಾಣಿಕರು ಕಡಿಮೆ ಆಗಿದ್ದಾರೆ ಎಂದು ಹೇಳಬಹುದು.
ಲಾಭ ಹೇಗೆ?
ರಿಸರ್ವೇಷನ್ ಮಾಡಿಸದೇ ಓಡಾಡುವವರಿಗೆ ಹೋಲಿಸಿದರೆ ರಿಸರ್ವೇಷನ್ ಮಾಡಿಸಿದ ಟಿಕೆಟ್ ದರ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾದರೂ ರೇಲ್ವೆ ಇಲಾಖೆ ಲಾಭವನ್ನು ಮಾತ್ರ ಕಳೆದುಕೊಂಡಿಲ್ಲ. ಜೊತೆಗೆ ಸರಕು ಸಾಗಣೆಯಲ್ಲಿ ಶೇ. 1.68 ರಷ್ಟು ಹೆಚ್ಚಳವನ್ನು ಸಹ ಕಂಡಿದೆ.