Saturday, April 1, 2023

Latest Posts

ಐಪಿಒ ತರಲು ಯೋಜಿಸಿದೆ ಟಾಟಾ ಟೆಕ್ನಾಲಜೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಜನಪ್ರಿಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್‌ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್‌ ಈಗ ಐಪಿಒ ಪ್ರಾರಂಭಿಸಲು ಯೋಜಿಸಿದ್ದು ಈ ಕುರಿತಾಗಿ ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಅರ್ಜಿ ಸಲ್ಲಿಸಿದೆ. ಜಾಗತಿಕ ಉತ್ಪನ್ನ ಎಂಜಿನಿಯರಿಂಗ್ ಮತ್ತು ಡಿಜಿಟಲ್ ಸೇವೆಗಳ ಕಂಪನಿಯಾಗಿರುವ ಟಾಟಾ ಟೆಕ್ನಾಲಜೀಸ್‌ ಕಂಪನಿಯು ವಿಮಾನ ತಯಾರಕ ಏರ್‌ಬಸ್ ಎಸ್‌ಎಗೆ ಕಾರ್ಯತಂತ್ರದ ಪೂರೈಕೆದಾರನಾಗಿದೆ ಮತ್ತು ಟಾಟಾ ಗ್ರೂಪ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಟಾಟಾ ಮೋಟಾರ್ಸ್‌ಗಳೊಂದಿಗೆ ಸಂಬಂಧ ಹೊಂದಿದೆ.

ಎಕ್ಸ್‌ಚೇಂಜ್ ಫೈಲಿಂಗ್‌ನ ಪ್ರಕಾರ, ಐಪಿಒ ಮೂಲಕ ಪಾವತಿಸಿದ ಷೇರು ಬಂಡವಾಳದ 23.6 ಪ್ರತಿಶತವನ್ನು ಪ್ರತಿನಿಧಿಸುವ ಸರಿಸುಮಾರು 9.5 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲು ಕಂಪನಿ ಯೋಜಿಸಿದೆ. ಟಾಟಾ ಮೋಟಾರ್ಸ್, ಆಲ್ಫಾ ಟಿಸಿ ಹೋಲ್ಡಿಂಗ್ಸ್ ಪಿಟಿಇ, ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ I ಸೇರಿದಂತೆ ಅದರ ಅಸ್ತಿತ್ವದಲ್ಲಿರುವ ಪ್ರವರ್ತಕರು ಮತ್ತು ಷೇರುದಾರರಿಂದ 95.71 ಮಿಲಿಯನ್ ಷೇರುಗಳ ಮಾರಾಟವನ್ನು ಐಪಿಒ ಒಳಗೊಂಡಿದೆ.

ಟಾಟಾ ಮೋಟಾರ್ಸ್ ಪ್ರಸ್ತುತ ಕಂಪನಿಯಲ್ಲಿ 74.69 ಶೇಕಡಾ ಪಾಲನ್ನು ಹೊಂದಿದೆ, ಆಲ್ಫಾ TC ಹೋಲ್ಡಿಂಗ್ಸ್ Pte ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ ಕ್ರಮವಾಗಿ 7.26 ಶೇಕಡಾ ಮತ್ತು 3.63 ಶೇಕಡಾ ಪಾಲನ್ನು ಹೊಂದಿವೆ. ಉಳಿದಂತೆ JM ಫೈನಾನ್ಶಿಯಲ್ ಲಿಮಿಟೆಡ್, BofA ಸೆಕ್ಯುರಿಟೀಸ್, ಮತ್ತು ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಇತರ ಪ್ರಮುಖ ವ್ಯವಸ್ಥಾಪಕರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!