ಮೊದಲ ಬಾರಿಗೆ ಭಾರತದಲ್ಲಿ ‘ಕಾರ್ಟೆನ್ ಸ್ಟೀಲ್’ ಉತ್ಪಾದಿಸಲಿದೆ ಟಾಟಾ- ಏನಿದರ ಮಹತ್ವ ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:‌
ಭಾರತದಲ್ಲಿ ʼಕಾರ್ಟೆನ್‌ ಸ್ಟೀಲ್‌ʼ ಉತ್ಪಾದನೆ ಮಾಡುವ ಪರವಾನಗಿಯನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ದೇಶದ ಪ್ರತಿಷ್ಟಿತ ಟಾಟಾ ಸ್ಟೀಲ್‌ ಗೆ ನೀಡಿದೆ. ಟಾಟಾ ಸ್ಟೀಲ್‌ನ ಜಾರ್ಖಂಡ್‌ನ ಜಮ್‌ಶೆಡ್‌ಪುರ ಸ್ಥಾವರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ʼಕಾರ್ಟೆನ್‌ ಸ್ಟೀಲ್ʼ ಉತ್ಪಾದನೆಯಾಗಲಿದೆ. ಕಾರ್ಟೆನ್ ಸ್ಟೀಲ್ ಬಳಸಿ ತಯಾರಿಸಲಾದ ಹಡಗು ಕಂಟೈನರ್‌ಗಳ ಆಮದಿನ ಮೇಲೆ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ಭಾರತದ ದೊಡ್ಡ ಪ್ರಯತ್ನದ ಭಾಗವಾಗಿ ಟಾಟಾ ಸ್ಟೀಲ್‌ಗೆ ಪರವಾನಗಿ ನೀಡಲಾಗಿದೆ.

ಕಾರ್ಟೆನ್‌ ಸ್ಟೀಲ್‌ ದರ್ಜೆಯ ಉಕ್ಕನ್ನು ಬಹುಮುಖ್ಯವಾಗಿ ಹಡಗು ಕಂಟೈನರ್‌ಗಳ ತಯಾರಿಕೆಯಲ್ಲಿ ಮತ್ತು ರೈಲುಬೋಗಿಯ ಸೈಡ್ ಪ್ಯಾನೆಲ್‌ಗಳು, ರೈಸ್ ಮಿಲ್ ಕಂಟೇನರ್‌ಗಳು, ಕಟ್ಟಡ ನಿರ್ಮಾಣ, ಪೀಠೋಪಕರಣಗಳು ಮತ್ತು ದುಬಾರಿ ಕಲಾಕೃತಿಗಳು, ಚಿಮಣಿಗಳು ಸೇರಿದಂತೆ ಹೆಚ್ಚಿನ ಸಾಮರ್ಥ್ಯದ ಹವಾಮಾನ ನಿರೋಧಕ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಬೆಳವಣಿಗೆಯು ಆಮದಿನ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗ ಹೊರಟಿರೋ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಕೊಡುಗೆ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!