ಕ್ಯಾನ್ಸರ್‌ ತರುತ್ತಿದೆ ಟ್ಯಾಟೂ; ಅಧ್ಯಯನದಲ್ಲಿ ಬಯಲಾಯ್ತು ಅಘಾತಕಾರಿ ವಿಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟ್ಯಾಟೂ ಹಾಕಿಸಿಕೊಳ್ಳುವುದು ಯುವಜನರಿಗೆ ಕ್ರೇಜ್. ಟ್ರೆಂಡ್‌ ಗೆ ತಕ್ಕಂತೆ ವಿವಿಧ ಬಗೆಯ ಹೊಸ ಹೊಸ ಬಗೆಯ ಡಿಸೈನ್‌ ಗಳು ಬಂದಿದ್ದು, ಹಲವಾರು ಜನರು ತಮ್ಮ ದೇಹದ ಇಷ್ಟವಾದ ಭಾಗಗಳಿಗೆ ವಿವಿಧ ಮಾದರಿಯ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.‌ ಕೆಲವರಿಗೆ ತಮ್ಮ ದೇಹದ ಟ್ಯಾಟೂಗಳನ್ನು ಪ್ರದರ್ಶಿಸುವುದು ಹೆಮ್ಮೆಯ ವಿಚಾರ ಕೂಡ. ಆದರೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್‌ ಬರಬಹುದು ಎಂಬ ಅಘಾತಕಾರಿ ವಿಚಾರ ಅಧ್ಯಯನದಿಂದ ಬಯಲಾಗಿದೆ.

ಈ ಬಗ್ಗೆ ಅಮೇರಿಕದ ವಿಜ್ಷಾನಿಗಳು ಅಧ್ಯಯನ ನಡೆಸಿದ್ದು, ಪ್ರಸ್ತುತ ಬಳಸಲಾಗುವ ಶೇ. 50 ರಷ್ಟು ಟ್ಯಾಟೂ ಇಂಕ್‌ ಗಳಲ್ಲಿ ಕ್ಯಾನ್ಸರ್-ಉಂಟುಮಾಡುವ ರಾಸಾಯನಿಕಗಳು ಪತ್ತೆಯಾಗಿದೆ ಎಂಬ ಅತಂಕಕಾರಿ ಮಾಹಿತಿ ತೆರೆದಿಟ್ಟಿದ್ದಾರೆ.
ಬಿಂಗ್‌ಹ್ಯಾಂಟನ್‌ನಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ 56 ಜನಪ್ರಿಯ ಟ್ಯಾಟೂ ಮಾದರಿಗಳನ್ನು ವ ವಿಶ್ಲೇಷಿಸಿದ್ದಾರೆ, ಅವುಗಳಲ್ಲಿ 23 ಗಹಂಚ್ಚೆ ಇಂಕ್‌ ಗಳು ಕ್ಯಾನ್ಸರ್‌ ಉಂಟು ಮಾಡಬಲ್ಲ ಅಪಾಯಕಾರಿ ರಾಸಾಯನಿಕವಾದ ಅಜೋ-ಸಂಯುಕ್ತಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ಅಜೋ-ಸಂಯುಕ್ತಗಳು ರಾಸಾಯನಿಕವಾಗಿ ಅಪಾಯಕಾರಿಯಲ್ಲ. ಆದರೆ, ಬ್ಯಾಕ್ಟೀರಿಯಾ, ನೇರಳಾತೀತ ಬೆಳಕು ಅಥವಾ ಸೂರ್ಯನ ಅತಿಯಾದ ಬೆಳಕಿ ಒಟ್ಟಿಕೊಂಡಾಗ ದಢೇಹದಲ್ಲಿ ಕ್ಯಾನ್ಸ್‌ ರ್‌ ಉಂಟುಮಾಡುವ ಸಂಯುಕ್ತಗಳಾಗಿ ಮಾರ್ಪಡಲಿದೆ ಎಂದು ಅಧ್ಯಯನ ತಿಳಿಸಿದೆ.
ಈ ಅಜೋ ಸಿಂಥೆಟಿಕ್‌ ಡೈಗಳನ್ನು ದೊಡ್ಡ ಕಂಪನಿಗಳು ಬಣ್ಣ ಮತ್ತು ಜವಳಿ ಮುಂತಾದ ಉತ್ಪನ್ನಗಳಲ್ಲಿ ಬಳಸಲಾಗಿತ್ತದೆ. ಇದೇ ವರ್ಣದ್ರವ್ಯಗಳನ್ನು ಹಚ್ಚೆ ಶಾಯಿಗಳಲ್ಲಿಯೂ ಬಳಸಲಾಗುತ್ತದೆ ಬಳಸಲಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಧ್ಯಯವೊಂದರ ಪ್ರಕಾರ ಅಮೆರಿಕದ 35% ರಷ್ಟು ಜನರು ತಮ್ಮ ದೇಹದ ಒಂದಿಲ್ಲೊಂದು ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!