ಶಾಲೆಯ ಲಿಫ್ಟ್ ಬಾಗಿಲುಗಳ ನಡುವೆ ಸಿಲುಕಿ ಶಿಕ್ಷಕಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶಾಲಾ ಲಿಫ್ಟ್ ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಉತ್ತರ ಮುಂಬೈನ ಉಪನಗರ ಮಲಾಡ್ ನ ಚಿಂಚೋಳಿ ಬಂದರ್ ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಜೆನೆಲ್ ಫರ್ನಾಂಡಿಸ್ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ಹೋಗಲು ಆರನೇ ಮಹಡಿಯಲ್ಲಿ ಕಾಯುತ್ತಿದ್ದರು. ಈ ವೇಳೆ ಬಾಗಿಲು ಮುಚ್ಚದ ಕಾರಣ, ಚೀಲವು ಸಿಕ್ಕಿಹಾಕಿಕೊಂಡಿತು, ಇದರಿಂದ ಆಕೆ ತಲೆ ಕೂಡ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಈ ವೇಳೆ ಶಾಲಾ ಸಿಬ್ಬಂದಿ ಅವಳ ಸಹಾಯಕ್ಕೆ ಧಾವಿಸಿದರು ಮತ್ತು ಅವಳನ್ನು ಹೊರಗೆಳೆಯಲಾಯಿತು ಎನ್ನಲಾಗಿದೆ. ಅವಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆ ಸತ್ತಿದ್ದಾಳೆ ಎಂದು ಘೋಷಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!