ಸುಕೇಶ್​ ತನ್ನ ಕನಸಿನ ಹುಡುಗ ಎಂದು ಮದುವೆಯಾಗಲು ಮನಸ್ಸು ಮಾಡಿದ್ದ ಜಾಕ್ವೆಲಿನ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

200 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​ ಜೊತೆ ಸಂಪರ್ಕದಲ್ಲಿದ್ದ ಬಾಲಿವುಡ್​ ನಟಿಯರಾದ ಜಾಕ್ವೆಲಿನ್​ ಫರ್ನಾಂಡಿಸ್​ ಮತ್ತು ನೋರಾ ಫತೇಹಿ ಅವರು ಕೂಡ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕೇಸ್​ಗೆ ಸಂಬಂಧಿಸಿದಂತೆ ನಟಿಯರನ್ನು ಆಗಾಗ ವಿಚಾರಣೆಗೆ ಒಳಪಡಿಸಲಾಗಗುತ್ತಿದೆ. ಈ ವೇಳೆ ಶಾಕಿಂಗ್​ ಸತ್ಯಗಳ ಬಯಲಾಗುತ್ತಿದೆ. ಅಚ್ಚರಿ ಏನೆಂದರೆ, ಸುಕೇಶ್​ ಚಂದ್ರಶೇಖರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಮದುವೆ ಆಗಲು ನಿರ್ಧರಿಸಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಸುಕೇಶ್​ ಚಂದ್ರಶೇಖರ್​ ಅನೇಕ ದುಬಾರಿ ಗಿಫ್ಟ್​ಗಳನ್ನು ನೀಡಿದ್ದರು. ಹಾಗಾಗಿ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರೂ ತುಂಬ ಕ್ಲೋಸ್​ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್​ ಆದವು. ಸುಕೇಶ್​ ಚಂದ್ರಶೇಖರ್​ ತನ್ನ ಕನಸಿನ ಹುಡುಗ ಎಂದು ಜಾಕ್ವೆಲಿನ್​ ಅಂದುಕೊಂಡಿದ್ದರು. ಹಾಗಾಗಿ ಅವರನ್ನೇ ಮದುವೆ ಮಾಡಿಕೊಳ್ಳುವುದಾಗಿಯೂ ಅವರು ನಿರ್ಧರಿಸಿದ್ದರು ಎನ್ನಲಾಗಿದೆ.
ಜಾಕ್ವೆಲಿನ್ ಮಾತ್ರವಲ್ಲದೆ, ನೋರಾ ಫತೇಹಿ ಸೇರಿದಂತೆ ಇತರ ಹಲವಾರು ನಟಿಯರು ಮತ್ತು ಸಾರ್ವಜನಿಕ ವ್ಯಕ್ತಿಗಳು ಸುಕೇಶ್ ಅವರಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!