ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣ ಸಾಕಷ್ಟು ಸದ್ದು ಮಾಡುತ್ತಿದೆ. ಪಾರ್ಥ ಚಟರ್ಜಿ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ.
ಇಡಿ ವಶದಲ್ಲಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಮಹಿಲೆಯೊಬ್ಬರು ಚಪ್ಪಲಿ ಎಸೆಯಲು ಯತ್ನಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪಾರ್ಥ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜೋಕಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಾಗ ಈ ಘಟನೆ ಸಂಭವಿಸಿದೆ. ಅಲ್ಲದೆ, ಮಾಜಿ ಸಚಿವ ಪಾರ್ಥ ಚಟರ್ಜಿಯವರ ವಿರುದ್ಧ ಮಹಿಲೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಅಂತಹ ನಾಯಕರು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ನಾನು ಚಪ್ಪಲಿ ಎಸೆದಿದ್ದೇನೆ’ ಎಂದು ಮಾಜಿ ಸಚಿವರತ್ತ ಚಪ್ಪಲಿ ಎಸೆದ ಮಹಿಳೆ ಹೇಳಿದ್ದಾರೆ.
ನಾನು ಔಷಧಿ ಖರೀದಿಸಲು ಇಲ್ಲಿಗೆ ಬಂದಿದ್ದೆ. ಅವರು ಫ್ಲಾಟ್‌ಗಳು ಮತ್ತು ಎಸಿ ಕಾರುಗಳನ್ನು ಖರೀದಿಸಲು ಬಡವರನ್ನು ಲೂಟಿ ಮಾಡಿದರು. ಅವರನ್ನು ಕಟ್ಟಿಹಾಕಿ ಬೀದಿಯಲ್ಲಿ ಎಳೆಯಬೇಕು. ನಾನು ನನ್ನ ಬೂಟುಗಳಿಲ್ಲದೆ ಮನೆಗೆ ಹೋಗುತ್ತೇನೆ. ಇನ್ನು, ಪಾರ್ಥ ಚಟರ್ಜಿಗೆ ಚಪ್ಪಲಿ ತಗುಲಿದ್ದರೆ ನನಗೆ ಇನ್ನೂ ಖುಷಿಯಾಗುತ್ತಿತ್ತು ಎಂದೂ ಆ ಮಹಿಳೆ ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ