ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ವಿಶ್ವವೇ ಸಾಂಕ್ರಾಮಿಕ ರೋಗದಿಂಗ ತತ್ತರಿಸಿ ಹೋಗಿತ್ತು. ಈ ವೇಳೆ ಉದ್ಯೋಗಾವಕಾಶಗಳು ಕೂಡ ಕುಸಿದು ಹೋಗಿತ್ತು. ಕೊರೋನಾ ಸಮಯದಲ್ಲಿ ಅನಿವಾರ್ಯವಾಗಿ ಅನೇಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಅದೇ ಸಾಲಿಗೆ ಶಿಕ್ಷಕರ, ಉಪನ್ಯಾಸಕರ ನೇಮಕಾತಿ ಕೂಡ ಸೇರುತ್ತದೆ.
ಕರೊನಾ ಸಮಯದಲ್ಲಿ ಶಿಕ್ಷಕರ, ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಇದೀಗ ವಯೋಮಿತಿಯಲ್ಲಿ 2 ವರ್ಷಗಳನ್ನು ಸಡಿಲಗೊಳಿಸಲಾಗಿದೆ. ಒಟ್ಟು 778 ಹುದ್ದೆಗಳ ನೇಮಕಾತಿಯಲ್ಲಿ ಇದು ಅನ್ವಯವಾಗಲಿದೆ.
ಸರ್ಕಾರ, ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಸಿದ್ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಕರ, ಉಪನ್ಯಾಸಕರಿಗೆ ಮುಂದಿನ 1 ವರ್ಷದ ಅವಧಿಯಲ್ಲಿ ನಡೆಯುವ ನೇರ ನೇಮಕಾತಿಗಳಿಗೆ ಇದು ಅನ್ವಯವಾಗಲಿದೆ.