ಸರಿಯಾಗಿ ಹಿಜಾಬ್ ಧರಿಸದ 14 ವಿದ್ಯಾರ್ಥಿನಿಯರ ತಲೆ‌‌ ಬೋಳಿಸಿದ ಶಿಕ್ಷಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾದಲ್ಲಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ 14 ವಿದ್ಯಾರ್ಥಿನಿಯರ ತಲೆಯನ್ನು ಬೋಳಿಸಲಾಗಿದೆ.

ಇಂಡೋನೇಷ್ಯಾದ ಮಶ್ರಿಕಿ ಜಾವಾದ ಸರ್ಕಾರಿ ಜೂನಿಯರ್ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಮಹಿಳೆಯರಿಗೆ ಕಠಿಣ ನಿಯಮಗಳಿವೆ, 14 ಹೆಣ್ಣುಮಕ್ಕಳು ಹಿಜಾಬ್ ಸರಿಯಾಗಿ ಧರಿಸಿರಲಿಲ್ಲ. ಹಾಗಾಗಿ ಅವರ ತಲೆಯನ್ನು ಬೋಳಿಸಲಾಗಿದೆ ಎಂದು ಮುಖ್ಯ ಶಿಕ್ಷಕರು ಹೇಳಿದ್ದಾರೆ. ಈ ಶಾಲೆಯಲ್ಲಿ ಹಿಜಾಬ್ ಕಡ್ಡಾಯವಲ್ಲ, ಆದರೆ ತಲೆಯನ್ನು ಮುಚ್ಚಿಕೊಂಡು ಸ್ಕಾರ್ಫ್ ಧರಿಸಿ ಬರುವಂತೆ ಸೂಚನೆ ನೀಡಲಾಗಿದೆ.

ಈ ಘಟನೆ ಆ.23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ, ಮಕ್ಕಳ ತಲೆ ಕೂದಲು ಬೋಳಿಸಿದ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಇನ್ನು ಶಾಲೆಯು ಬಾಲಕಿಯರ ಪೋಷಕರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!