ಕಣಿವೆ ರಾಜ್ಯದಲ್ಲಿ ವಿಶ್ವ ಸುಂದರಿಯ ಸುತ್ತಾಟ, ಕಾಶ್ಮೀರ ಸೊಬಗಿಗೆ ಕ್ಲೀನ್‌ ಬೋಲ್ಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಸಿರು ಮರಗಳು… ಆಳವಾದ ಕಣಿವೆಗಳು… ಎತ್ತರದ ಬೆಟ್ಟಗಳು… ಹಿಮಾಚ್ಛಾದಿತ ಪರ್ವತಗಳ ಸೊಬಗಿಗೆ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಮಾರು ಹೋಗಿದ್ದಾರೆ. ಇವರ ಜೊತೆಗೆ ಇತರ ಅನೇಕ ಸುಂದರಿಯರು ಕಾಶ್ಮೀರ ಕಣಿವೆಯ ನೈಸರ್ಗಿಕ ಸೌಂದರ್ಯವನ್ನು ಆನಂದಿಸಿದ್ದಾರೆ.

 ಕಾಶ್ಮೀರದಲ್ಲಿ ನೋಡಲು ಸುಂದರವಾದ ದೃಶ್ಯಾವಳಿಗಳು ಇರುತ್ತವೆ ಎಂದು ತಿಳಿದಿತ್ತು. ಆದರೆ ಇಂದು ನಾವು ನೋಡಿದ್ದು ನಿಜಕ್ಕೂ ಅದ್ಭುತವಾಗಿತ್ತು. ಎಲ್ಲರೂ ನಮ್ಮನ್ನು ಎಷ್ಟು ಸೊಗಸಾಗಿ ಸ್ವಾಗತಿಸಿದ್ದಾರೆ ಅಂತ ಕರೋಲಿನಾ ಬಿಲಾವ್ಸ್ಕಾ ಹೇಳಿದ್ದಾರೆ.

ಮಿಸ್ ವರ್ಲ್ಡ್ 2023 ರ ಪೂರ್ವ ಕಾರ್ಯಕ್ರಮವು ಶ್ರೀನಗರದಲ್ಲಿ ನಡೆಯಿತು. ಮಿಸ್ ವರ್ಲ್ಡ್ ಜೊತೆಗೆ ಮಿಸ್ ವರ್ಲ್ಡ್ ಕೆರಿಬಿಯನ್, ಎಮ್ಮಿ ಪೆನಾ, ವಿಶ್ವ ಸುಂದರಿ ಅಮೇರಿಕಾ ಶ್ರೀ ಸೈನಿ, ‌ ಮಿಸ್ ವರ್ಲ್ಡ್ ಇಂಡಿಯಾ ಸಿನಿ ಶೆಟ್ಟಿ, ವಿಶ್ವ ಸುಂದರಿ ಇಂಗ್ಲೆಂಡ್ ಜೆಸ್ಸಿಕಾ ಗ್ಯಾಗೆನ್, ಏಷ್ಯಾ ಸುಂದರಿ ಪ್ರಿಸ್ಸಿಲ್ಲಾ ಕಾರ್ಲಾ ಸಪುತ್ರಿ ಯೂಲ್ಸ್ ಕಾಶ್ಮೀರ ಪ್ರವಾಸ ಮಾಡಿದರು. ಈ ಪ್ರವಾಸದಲ್ಲಿ ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಎರಿಕ್ ಮೊರ್ಲೆ ಕೂಡ ಭಾಗವಹಿಸಿದ್ದರು.

 ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಮಿಸ್ ವರ್ಲ್ಡ್ ಇಂಡಿಯಾ ಸಿನಿ ಶೆಟ್ಟಿ ಮತ್ತು ವಿಶ್ವ ಸುಂದರಿ ಕೆರಿಬಿಯನ್ ಎಮ್ಮಿ ಪೆನಾ ಕೂಡ ಈ ವೇಳೆ ವಿಶ್ವಸುಂದರಿಗೆ ಜೊತೆಯಾಗಿದ್ದಾರೆ.

ವಿಶ್ವವಿಖ್ಯಾತ ದಾಲ್ ಸರೋವರ ಸೇರಿದಂತೆ ಶ್ರೀನಗರ ನಗರವನ್ನು ಸುಂದರಿಯರು ಸುತ್ತಿ, ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನು ಕೊಂಡಾಡಿದ್ದಾರೆ. ಆರು ಬಾರಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರುವ ಭಾರತ ಮೂರು ದಶಕಗಳ ನಂತರ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಭಾರತ ಕೊನೆಯ ಬಾರಿಗೆ 1996 ರಲ್ಲಿ ಈವೆಂಟ್ ಅನ್ನು ಆಯೋಜಿಸಿತ್ತು.

 ಕಾರ್ಯಕ್ರಮವೊಂದಕ್ಕಾಗಿ ಶ್ರೀನಗರಕ್ಕೆ ಬಂದಿರುವ ಅವರು, ಒಂದು ದಿನದಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ರು. ಕರೋಲಿನಾ ಬಿಲಾವ್ಸ್ಕಾ ಅವರು ಕಾಶ್ಮೀರಿ ಸಂಸ್ಕೃತಿಗೆ ಮಾರು ಹೋಗಿದ್ದು, ನಿಶಾತ್ ಬಾಗ್ನಲ್ಲಿ ಕಾಶ್ಮೀರಿ ಉಡುಗೆಯನ್ನು ತೊಟ್ಟು ಸಂಭ್ರಮಿಸಿದರು.

ಕಣಿವೆ ರಾಜ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ವರ್ಷದ ಮೊದಲ ಆರು ತಿಂಗಳಲ್ಲಿ ಸುಮಾರು 17,000 ವಿದೇಶಿಗರು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!