ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್‌ನ ಮೂರನೇ ದಿನದ ಮೂರನೇ ಸೆಷನ್ನಲ್ಲಿ ಭಾರತ 255 ರನ್‌ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿದೆ. ಇದರೊಂದಿಗೆ ಇಂಗ್ಲೆಂಡ್ ಗೆಲುವಿಗೆ 398 ರನ್‌ಗಳ ಗುರಿ ನೀಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ (Shubman Gill) ಅವರ 104 ರನ್‌ಗಳ ಶತಕದ ಇನ್ನಿಂಗ್ಸ್ ಹಾಗೂ ಅಕ್ಷರ್ ಪಟೇಲ್ (Axer Patel) ಸಿಡಿಸಿದ 45 ರನ್‌ಗಳ ಆಧಾರದ ಮೇಲೆ 255 ರನ್ ಕಲೆಹಾಕಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 253 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಆ ಬಳಿಕ ಎರಡನೇ ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು. ಆದರೆ ಮೂರನೇ ದಿನ ಟೀಂ ಇಂಡಿಯಾ ತನ್ನೇಲ್ಲ ವಿಕೆಟ್ ಕಳೆದುಕೊಂಡು 227 ರನ್ ಗಳಿಸಲಷ್ಟೇ ಶಕ್ತವಾಯಿತು.
ಟೀಂ ಇಂಡಿಯಾ ಪರ ಶುಭ್‌ಮನ್ ಹೊರತುಪಡಿಸಿ ಅಕ್ಷರ್ ಪಟೇಲ್ 45 ರನ್‌ಗಳ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ತಲಾ 29 ರನ್‌ಗಳ ಕಾಣಿಕೆ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ 17 ರನ್‌ಗಳಿಗೆ ಸುಸ್ತಾದರೆ. ಇಡೀ ಸರಣಿಯಲ್ಲಿ ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ ಕೂಡ 13 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು.