Wednesday, August 10, 2022

Latest Posts

ಶ್ರೀಲಂಕಾ ವಿರುದ್ಧ ಗೆದ್ದು ಸಂಭ್ರಮಿಸಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ. ಎರಡನೇ ಪಂದ್ಯದಲ್ಲಿ 25.4 ಓವರ್​​ಗಳಲ್ಲಿ ಗುರಿ ಬೆನ್ನತ್ತಿದ ಭಾರತ ಭರ್ಜರಿ ಗೆಲುವು ದಾಖಲು ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹಿಳೆಯರ ತಂಡ 50 ಓವರ್​​ಗಳಲ್ಲಿ 10 ವಿಕೆಟ್ ಕಳೆದುಕೊಂಡು ಕೇವಲ 173ರನ್​ ಮಾತ್ರ ಗಳಿಸಲು ಶಕ್ತವಾಯಿತು.
174 ರನ್​​ಗಳ ಗುರಿ ಬೆನ್ನತ್ತಿದ ಭಾರತ ಯಾವುದೇ ವಿಕೆಟ್​ನಷ್ಟವಿಲ್ಲದೇ 25.4 ಓವರ್​​ಗಳಲ್ಲಿ 174ರನ್​​ಗಳಿಕೆ ಮಾಡಿ, ಗೆಲುವಿನ ನಗೆ ಬೀರಿತು. ತಂಡದ ಪರ ಆರಂಭಿಕರಾದ ಶೆಫಾಲಿ ಶರ್ಮಾ ಅಜೇಯ 71ರನ್​ ಹಾಗೂ ಸ್ಮೃತಿ ಮಂಧಾನ ಅಜೇಯ 94 ರನ್​​ಗಳಿಕೆ ಮಾಡಿ, ತಂಡವನ್ನ ಗೆಲುವಿನ ದಡ ಸೇರಿಸಿದರು. ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss