ಬಂಗಾಳ ಕ್ರಿಕೆಟ್‌ ತಂಡದ ಕೋಚ್‌ ಆಗಿ ಟೀಂ ಇಂಡಿಯಾ ಮಾಜಿ ಆಲ್ರೌಂಡರ್‌ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾರತ ತಂಡದ ಮಾಜಿ ಆಲ್ರೌಂಡರ್ ಲಕ್ಷ್ಮಿ ರತನ್ ಶುಕ್ಲಾ ಅವರು ಪಶ್ಚಿಮ ಬಂಗಾಳ ರಣಜಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇವರ ಜೊತೆಗೆ ಡಬ್ಲ್ಯೂ.ವಿ.ರಾಮನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ಬಂಗಾಳದ ಕೋಚ್ ಆಗಿದ್ದ ಅರುಣ್‌ ಲಾಲ್‌ ಕೆಲದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಕೊಚ್‌ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿತ್ತು. ಲಕ್ಷ್ಮಿ ರತನ್ ಶುಕ್ಲಾ ಅವರನ್ನು ನೂತನ ಕೋಚ್‌ ಆಗಿ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾ ಪರ ಮೂರು ಏಕದಿನ ಪಂದ್ಯ, 137 ಪ್ರಥಮ ದರ್ಜೆ ಪಂದ್ಯ ಮತ್ತು 141 ಲಿಸ್ಟ್ ʼಎʼ ಪಂದ್ಯಗಳನ್ನು ಆಡಿರುವ 41 ವರ್ಷದ ಶುಕ್ಲಾ, ಬಂಗಾಳ ಅಂಡರ್-23 ತಂಡದ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ.
ಅದಾಗ್ಯೂ, ಕೋಚ್‌ ಆಗಿ ಶುಕ್ಲಾ ಸಿಎಬಿಯ ಮೊದಲ ಆಯ್ಕೆ ಆಗಿರಲಿಲ್ಲ. ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ CAB ಯ ಮೊದಲ ಆಯ್ಕೆಯಾಗಿದ್ದರು, ಆದರೆ ಅವರು ಈ ನಡುವೆ ಬಾಂಗ್ಲಾದೇಶ U-19 ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಆ ಬಳಿಕ ಮುಂಬೈನ ಮಾಜಿ ಆಲ್ರೌಂಡರ್‌ ಅಭಿಷೇಕ್ ನಾಯರ್ ಅಥವಾ ಆಂಡಿ ಫ್ಲವರ್‌ ರನ್ನು  ತರಬೇತುದಾರನನ್ನು ನೇಮಿಸಿಕೊಳ್ಳುವ ಬಗ್ಗೆ ರಾಜ್ಯ ತಂಡವು ಯೋಚಿಸಿತ್ತು. ಆದರೆ ಅಂತಿಮವಾಗಿ ಶುಕ್ಲಾ ಹಾಗೂ ಅಶೋಕ್ ದಿಂಡಾ ರನ್ನು ಫೈನಲ್‌ ಮಾಡಲಾಗಿತ್ತು. ಬ್ಯಾಟಿಂಗ್‌ ಕೋಚ್‌ ಡಬ್ಲ್ಯೂ.ಬಿ. ರಾಮನ್ ಈ ಹಿಂದೆ ಎರಡು ಅವಧಿಗಳಲ್ಲಿ ಬಂಗಾಳದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!