ಚಂದ್ರಯಾನ 3 ಯಶಸ್ಸನ್ನು ಸಂಭ್ರಮಿಸಿದ ಟೀಮ್​ ಇಂಡಿಯಾ ಆಟಗಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ 3 ಯಶಸ್ಸನ್ನು ಟೀಮ್​ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ.

ಟಿ20 ಸರಣಿಯನ್ನಾಡಲು ಐರ್ಲೆಂಡ್​ ಪ್ರವಾಸದಲ್ಲಿದ್ದು, ಬುಧವಾರ ಸರಣಿಯ ಅಂತಿಮ ಪಂದ್ಯ ಆಡುವ ಮೊದಲು ಆಟಗಾರರು ಭಾರತ ಕಳುಹಿಸಿದ್ದ ಚಂದ್ರಯಾನ 3 ನೌಕೆಯ (Chandrayaan 3) ಲ್ಯಾಂಡರ್ (Lander) ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಸಂಭ್ರಮಿಸಿದ್ದಾರೆ.

ಈ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಮಿಷನ್​ ಸಕ್ಸಸ್​ ಎಂದು ಬರೆದುಕೊಂಡಿದೆ.

ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಸದ್ಯ ಪಂದ್ಯ ವಿಳಂಬವಾಗಿ ಆರಂಭಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡು ಸರಣಿ ವಶಪಡಿಸಿಕೊಂಡಿರುವ ಭಾರತ ಅಂತಿಮ (IRE vs IND, 3rd T20I) ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಳ್ಳುವುದು ಜಸ್​ಪ್ರೀತ್​ ಬುಮ್ರಾ(Jasprit Bumrah) ಪಡೆಯ ಯೋಜನೆಯಾಗಿದೆ.

ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ​ ಕ್ರಿಕೆಟಿಗರು

ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಾಧಿಸಿ ತೋರಿಸಿದೆ. ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಈ ಸಂಭ್ರಮ ಕ್ಷಣವನ್ನು ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹವಾಗ್​, ಗೌತಮ್​ ಗಂಭೀರ್​, ಯುವರಾಜ್​ ಸಿಂಗ್​ ಸೇರಿ ಹಲವು ಕ್ರಿಕೆಟಿಗರು ಟ್ವೀಟ್​ ಮೂಲಕ ಸಂಭ್ರಮಿಸಿದ್ದಾರೆ.

‘ನಾವು ಸೂರ್ಯಾಸ್ತವನ್ನು ಸಮೀಪಿಸುತ್ತಿದ್ದಂತೆ ಚಂದ್ರನ ಅಂಗಳಕ್ಕೆ ನೌಕೆಯನ್ನು ಇಳಿಸಿದ್ದೇವೆ. ಎಂತಹ ವೈಭವದ ಕ್ಷಣ. ಪ್ರತಿ ಹಿನ್ನಡೆಯ ನಂತರ ಬಲವಾದ ಪುನರಾಗಮನವಾಗಿದೆ ಎಂದು ಸಾಬೀತುಪಡಿಸುತ್ತದೆ. ಭಾರತವು ವಿಫಲವಾಗಬೇಕೆಂದು ಬಯಸಿದ ಎಲ್ಲರಿಗೂ ಹಿನ್ನಡೆಯಾಗಿದೆ. ಭಾರತದ ಶಕ್ತಿ ಏನೆಂಬುದು ಇಡೀ ಜಗತ್ತಿಗೆ ಸಾಭೀತಾಗಿದೆ. ಭಾರತೀಯನಾಗಿ ಅತ್ಯಂತ ಹೆಮ್ಮೆ ಪಡುವ ದಿನಗಳಲ್ಲಿ ಇದು ಕೂಡ ಒಂದಾಗಿದೆ.’ ಎಂದು ಸೆಹವಾಗ್(virender sehwag)​ ಟ್ವಿಟ್​ ಮಾಡಿದ್ದಾರೆ.

‘ಪ್ರತಿ ಹಾರ್ಡ್ ಲ್ಯಾಂಡಿಂಗ್‌ನಲ್ಲಿ ಪಾಠಗಳಿವೆ, ಅದು ನಮ್ಮನ್ನು ಮೃದುವಾದ ಲ್ಯಾಂಡಿಂಗ್‌ನ ಹತ್ತಿರಕ್ಕೆ ಕೊಂಡೊಯ್ಯುತ್ತದೆ- ಚಂದ್ರನ ಮೇಲೆ ಮತ್ತು ಜೀವನದ ಮೇಲೆಯೂ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 (Chandrayana 3) ಯಶಸ್ವಿಯಾಗಿದೆ. ಇಸ್ರೋ ಮುಖ್ಯಸ್ಥ ಬಿ.ಸೋಮನಾಥ್​ ಅವರ ತಂಡಕ್ಕೆ ಅಭಿನಂದನೆಗಳು’ ಎಂದು ಸಚಿನ್​ ತೆಂಡೂಲ್ಕರ್(sachin tendulkar)​ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!