ದ್ರಾವಿಡ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಆಟಗಾರರು ಬ್ಯಾಟಿಂಗ್​ ಅಭ್ಯಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಆತಿಥೇಯ ಭಾರತ ತಂಡ ಇಂದು ತಾಲೀಮು ಆರಂಭಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಲ್ಲ ಆಟಗಾರರು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದರು. ಹೆಚ್ಚಾಗಿ ಸ್ಪಿನ್​ ಎಸೆತಕ್ಕೆ ಅಭ್ಯಾಸ ನಡೆಸಿದ್ದಾರೆ. ಮೊದಲ ಟೆಸ್ಟ್​ ಪಂದ್ಯ ಜನವರಿ 25ರಿಂದ ಇದೇ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ಶನಿವಾರ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಎಲ್ಲ ಆಟಗಾರರು ಬ್ಯಾಟಿಂಗ್ ನತ್ತ ಗಮನ ಹರಿಸಿದರು. ಏಕೆಂದರೆ ಇಂಗ್ಲೆಂಡ್ ಆಕ್ರಮಣಕಾರಿ ಕ್ರಿಕೆಟ್‌ನೊಂದಿಗೆ ಹೊಸ ಬೇಸ್‌ಬಾಲ್ ಆಟವನ್ನು ಪ್ರಾರಂಭಿಸಿದ್ದು ಅದು ಪ್ರಸ್ತುತ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಈ ಕಾರಣಕ್ಕಾಗಿ ಭಾರತವನ್ನು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಸಜ್ಜುಗೊಳಿಸಲು ಆದ್ಯತೆ ನೀಡಲಾಗಿದೆ.

ಈಗಾಗಲೇ ಕೋಚ್​ ದ್ರಾವಿಡ್​ ಎಲ್ಲ ಆಟಗಾರರಿಗೆ ಗಂಭೀರ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಈ ಸರಣಿಯನ್ನು ಹಗುರವಾಗಿ ಪರಿಗಣಿಸಬಾರದು ಮತ್ತು ತವರು ಮೈದಾನದ ಆಲೋಚನೆಯನ್ನು ಬದಿಗಿಟ್ಟು ಕಠಿಣ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!